ಜಿಲ್ಲೆ

ಮುಂದುವರಿದ ಉಪನ್ಯಾಸಕರ ಪ್ರತಿಭಟನೆ

ಸುನಿಲ್ ಪೊನ್ನೇಟಿ

ಮಡಿಕೇರಿ

ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಅತಿಥಿ ಉಪನ್ಯಾಸಕರ ಪ್ರತಿಭಟನೆ ಮುಂದುವರಿದಿದ್ದು ಶನಿವಾರವೂ ತರಗತಿಗಳನ್ನು ಬಹಿಷ್ಕರಿಸಿದ್ದರು. ಈ ಕಾಲೇಜಿನಲ್ಲಿ ಮಂಗಳೂರು ವಿವಿಯ ಅಡಿಯಲ್ಲಿ ಸುಮಾರು ೪೫ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಕಳೆದ ಐದು ತಿಂಗಳಿನಿಂದ ಇವರಿಗೆ ವೇತನ ಆಗಿಲ್ಲ. ವ?ರ್ದಲ್ಲಿ ಹತ್ತು ತಿಂಗಳು ಮಾತ್ರ ಕೆಲಸ ಮಾಡುತ್ತೇವೆ. ಪ್ರತಿ ವ?ರ್ ಕೂಡ ನಮಗೆ ಸಂದರ್ಶನ ಮಾಡಿ ನೇಮಕ ಮಾಡಿಕೊಳ್ಳಲಾಗುತ್ತದೆ. ೨೫ ವ?ರ್ ಕೆಲಸ ಮಾಡುತ್ತಿರುವವರೂ ಕೂಡ ಇದ್ದೇವೆ. ಆದರೆ ನಮಗೆ ಸೂಕ್ತ ಕಾಲಕ್ಕೆ ವೇತನ ದೊರಕುತ್ತಿಲ್ಲ. ಇದರಿಂದ ನಮ್ಮ ಜೀವನ ನಿರ್ವಹಣೆ ತೀರಾ ಕ?್ಟವಾಗಿದೆ ಎಂದು ಅಳಲು ತೋಡಿಕೊಂಡಿರುವ ಅತಿಥಿ ಉಪನ್ಯಾಸಕರು ತಮಗೆ ಪೂರ್ತಿ ವೇತನ ನೀಡುವ ವರೆಗೆ ತರಗತಿ ಬಹಿ?್ಕರಿಸಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.