ಜಿಲ್ಲೆ

ಮುಂದುವರಿದ ಅರ್ನಿದಿಷ್ಟಾವಧಿ ಮುಷ್ಕರ

ಸೋಮಲಿಂಗ ತಳವಾರ

ಎಂ.ಕೆ.ಹುಬ್ಬಳ್ಳಿ: ಬಾಕಿ ವೇತನ ಪಾವತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸ್ಥಳಿಯ ಪಟ್ಟಣ ಪಂಚಾಯಿತಿ ಕಚೇರಿ ಎದುರು ಪೌರಕಾರ್ಮಿಕರು ಮಂಗಳವಾರದಿಂದ ಆರಂಭಿಸಿರುವ ಅರ್ನಿದಿಷ್ಟಾವಧಿ ಮುಷ್ಕರ ಬುಧವಾರವೂ ಮುಂದುವರಿಯಿತು.

ಪೌರಕಾರ್ಮಿಕರ ಸಂದ ಅಧ್ಯ ರಾಜು ಪಾಗಾದ ಮಾತನಾಡಿ, ಬಾಕಿ ಉಳಿದಿರುವ 11 ತಿಂಗಳ ವೇತನ ತಣ ಬಿಡುಗಡೆ ಮಾಡಬೇಕು. ಪೌರ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಿ, ಜ್ಯೋತಿ ಸಂಜೀವಿನಿ ಕೆಜಿಐಡಿ ಸೇರಿ ಸರ್ಕಾರಿ ನೌಕರರು ಪಡೆಯುವ ಎಲ್ಲ ಸೌಲಭ್ಯ ನೀಡಬೇಕು. ನಮ್ಮ ವೇತನ ಪಾವತಿಯನ್ನು ಸ್ಥಳಿಯ ಸಂಸ್ಥೆಯ ಅನುದಾನದಡಿ ವಹಿಸಲಾಗಿದೆ. ಅನುದಾನದ ಕೊರತೆಯಿಂದ ಸರಿಯಾಗಿ ವೇತನ ಸಿಗುತ್ತಿಲ್ಲ. ಹೀಗಾಗಿ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ. ಪಟ್ಟಣದ ಸ್ವಚ್ಛತೆಗೆ ಶ್ರಮಿಸುವ ನಾವು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಹಾಗಾಗಿ ತಣ ಬಾಕಿ ವೇತನ ಪಾವತಿಗೆ ಕ್ರಮಕೆಗೊಳ್ಳಬೇಕು ಎಂದು ಒತ್ತಾಯಿಸಿದರು.

ಉಪಾಧ್ಯ ಮಲ್ಲೇಶ ತುಪ್ಪದ, ನಿರ್ದೇಶಕರಾದ ವಿಠ್ಠಲ ತಳವಾರ, ಈರಪ್ಪ ಪಾಗಾದ, ಶಂಕರ ಹುಚ್ಚನವರ, ಮಡಿವಾಳಪ್ಪ ಕಾದ್ರೊಳ್ಳಿ, ಮಂಜುನಾಥ ಮೆಲಕ್ಕನವರ, ಯಲ್ಲಪ್ಪ ಸಣ್ಣಮನಿ, ಮಲ್ಲಿಕಾರ್ಜುನ ಇಂಚಲ, ಪರಶುರಾಮ ಪಾಗಾದ, ಮಂಜುನಾಥ ಪಟ್ಟಣಶೆಟ್ಟಿ, ಶಿವಾನಂದ ಪಾಗಾದ, ಮಲ್ಲವ್ವ ಮಾದಾರ, ಸುಮನ ಮಲಕರಿ, ದ್ಯಾಮವ್ವ ಹಾಲಗಿ, ಮಲಪ್ರಭಾ ಕಾದ್ರೊಳ್ಳಿ, ಶಿಲ್ಪಾ ಕೋಳಕಾರ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.