ಮೂಡಿಗೆರೆ ತಾಲೂಕಿನ ಕುನ್ನಳ್ಳಿ ಅಂಬೇಡ್ಕರ್ ನಗರದ ಮಹೇಶ್ ಎಂಬುವರ ಮನೆ ಕುಸಿದಿದೆ. 
ಜಿಲ್ಲೆ

ಮುಂದುವರಿದ ಹಾನಿ

ಎಸ್.ಎನ್.ರವೀಂದ್ರ

ಮೂಡಿಗೆರೆ: ತಾಲೂಕಿನಲ್ಲಿ ಶುಕ್ರವಾರ ಸಾಧಾರಣ ಮಳೆಯಾದರೂ ಹಾನಿ ಮುಂದುವರಿದಿದೆ.

ಅಣಜೂರು ಗ್ರಾಮದ ಅಬ್ದುಲ್ ಕರೀಂ ಎಂಬುವವರ ಮನೆ ಭಾಗಶಃ ಕುಸಿದಿದೆ. ಕುನ್ನಳ್ಳಿ ಗ್ರಾಮದ ಮಹೇಶ ಎಂಬುವವರ ಮನೆ ಸಂಪೂರ್ಣ ಕುಸಿದಿದೆ. ಸಮಾಜ ಕಲ್ಯಾಣ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸೋಮಶೇಖರ್, ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳ ಮಾಜಿ ಅಧ್ಯಕ್ಷ ಮುತ್ತಪ್ಪ ಸ್ಥಳ ಪರಿಶೀಲನೆ ನಡೆಸಿದರು. ವಿದ್ಯುತ್ ಕಂಬದ ಮೇಲೆ ಅಲ್ಲಲ್ಲಿ ಮರ ಬಿದ್ದು ಕಂಬಗಳು ಮತ್ತು ತಂತಿ ತುಂಡಾಗಿ ಹಾನಿಯುಂಟಾಗಿದೆ. ವಿದ್ಯುತ್ ಸಂಪರ್ಕ ಕಲ್ಪಿಸಲು ಮೆಸ್ಕಾಂ ಸಿಬ್ಬಂದಿ ಪ್ರಯತ್ನದಲ್ಲಿ ತೊಡಗಿದ್ದಾರೆ. ಗ್ರಾಮೀಣ ಭಾಗದಲ್ಲಿ 15 ದಿನದಿಂದ ವಿದ್ಯುತ್ ಇಲ್ಲದೆ ಕುಡಿಯುವ ನೀರಿಗೆ ತೊಂದರೆಯುಂಟಾಗಿದೆ.