ಟಿ.ಎಸ್. ಶ್ರೀನಿವಾಸ್ 
ಜಿಲ್ಲೆ

ಮೀಸಲಾತಿ ಯಥಾಸ್ಥಿತಿ ಮುಂದುವರಿಸಿ

ಜಿ.ಹೆಚ್. ಧನ್ಯಕುಮಾರ್

ಕಡೂರು: ಕರ್ನಾಟಕದಲ್ಲಿ ಇರುವ ಮೀಸಲಾತಿಯನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಿಕೊಂಡು ಹೋಗಬೇಕು ಎಂದು ಆಲ್ ಇಂಡಿಯಾ ಬಂಜಾರ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಟಿ.ಎಸ್.ಶ್ರೀನಿವಾಸ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಸದಾಶಿವ ಆಯೋಗದ ವರದಿ ಜಾರಿಗೆ ತರಬಾರದು. ಬಂಜಾರ ಸಮುದಾಯದ ಹಿತ ಕಾಪಾಡಬೇಕು ಎಂದರು. ರಾಜಕೀಯ ಲಾಭಕ್ಕಾಗಿ ಒಳಮೀಸಲಾತಿ ಜಾರಿ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಈ ಹಿಂದೆಯೇ ರಾಜ್ಯಸರ್ಕಾರಕ್ಕೆ ಸೂಚಿಸಿದೆ. ಒಳಮೀಸಲಾತಿ ಜಾರಿಯಾದರೆ ಮುಖ್ಯವಾಹಿನಿಗೆ ಬರಬೇಕಾದ ಬಂಜಾರ ಸಮಾಜದವರು ಮುಂದಿನ ದಿನಗಳಲ್ಲಿ ಕೆಳಮಟ್ಟದಲ್ಲಿ ಜೀವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಪರಿಶಿಷ್ಟರಲ್ಲಿಯೇ ಬೇಧ ಭಾವ ಉಂಟಾಗಲಿದೆ. ಹಾಗಾಗಿ ಈಗಿರುವ ಮೀಸಲಾತಿಯನ್ನೇ ರಾಜ್ಯ ಸರ್ಕಾರದ ಮುಂದುವರಿಸಬೇಕು. ಸರ್ಕಾರ ಇದನ್ನು ಮೀರಿ ಒಳಮೀಸಲಾತಿ ಜಾರಿಗೆ ಮುಂದಾದರೆ ಬಂಜಾರ ಸಮಾಜ ಉಗ್ರ ಹೋರಾಟ ನಡೆಸಲಿದೆ ಎಂದರು.