ಹನುಮಸಾಗರ ಸಮೀಪದ ಹನುಮನಾಳ ಗ್ರಾಮದ ಸಪಪೂ ಕಾಲೇಜಿಗೆ ಕುಷ್ಟಗಿ ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಡಾ.ಎಸ್.ವಿ. ಡಾಣಿ ಉಪನ್ಯಾಸಕರೊಂದಿಗೆ ಭೇಟಿ ನೀಡಿ ಸ್ಥಳೀಯ ಪ್ರಾಚಾರ್ಯ ಸಂಜಯ ಬಡಿಗೇರ ಅವರಿಗೆ ಪದವಿ ವಿಷಯವಾರು ಪಟ್ಟಿ ನೀಡಿದರು. ಉಪನ್ಯಾಸಕರಾದ ಅಶೋಕ ಕೆಂಚರಡ್ಡಿ, ಭೋಜರಾಜ್, ರವಿ, ವಿಶ್ವನಾಥ ಕೊಳುರ, ಬಿ.ನಾಗೇಂದ್ರಪ್ಪ ಇತರರಿದ್ದರು.  
ಜಿಲ್ಲೆ

ತವರು ಜಿಲ್ಲೆಯಲ್ಲಿ ಅಭ್ಯಾಸ ಮುಂದುವರಿಸಿ

ರುದ್ರಪ್ಪ ವಾಲಿ

ಹನುಮಸಾಗರ: ಬೇರೆ ಜಿಲ್ಲೆ ಹಾಗೂ ಖಾಸಗಿ ಕಾಲೇಜುಗಳಿಗೆ ಸೇರುವ ಬದಲು ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿರುವ ಕುಷ್ಟಗಿ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಳ್ಳಬೇಕು ಎಂದು ಪ್ರಾಚಾರ್ಯ ಡಾ.ಎಸ್.ವಿ.ಡಾಣಿ ಹೇಳಿದರು.

ಸಮೀಪದ ಹನುಮನಾಳ ಗ್ರಾಮದ ಸಪಪೂ ಕಾಲೇಜಿಗೆ ಸೋಮವಾರ ಉಪನ್ಯಾಸಕರೊಂದಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಪಿಯು ನಂತರ ಪದವಿ ಪಡೆದುಕೊಳ್ಳಲು ಖಾಸಗಿ ಶಿಕ್ಷಣ ಸಂಸ್ಥೆಗಳ ಮೊರೆ ಹೋಗಿ ಸಾವಿರಾರು ರೂ.ಖರ್ಚು ಮಾಡಬೇಡಿ. ಬೇರೆ ತಾಲೂಕು ಹಾಗೂ ಜಿಲ್ಲೆಗಳಿಗೆ ಹೋಗುವ ಬದಲಾಗಿ ನಿಮ್ಮ ತಾಲೂಕಿನಲ್ಲಿಯೇ ವಿವಿಧ ಸೌಲಭ್ಯಗಳನ್ನು ಹೊಂದಿರುವ ಕುಷ್ಟಗಿ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಳ್ಳಬೇಕು.

ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಿದ್ದು, ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣದ ಜತೆಯಲ್ಲಿ ವಸತಿ ನಿಲಯಗಳು, ಕಂಪ್ಯೂಟರ್ ತರಗತಿ, ಗ್ರಂಥಾಲಯ, ಕ್ರೀಡಾಕೂಟಗಳ ಸೌಲಭ್ಯಗಳು ಇವೆ ಎಂದರು.

ಉಪನ್ಯಾಸಕರಾದ ಮಹಾಂತೇಶ ಗವಾರಿ, ಎಸ್.ಸಿ.ಬಂಡಿಹಾಳ, ಪಿಯು ಕಾಲೇಜು ಪ್ರಾಚಾರ್ಯ ಸಂಜಯ ಬಡಿಗೇರಿ, ಉಪನ್ಯಾಸಕರಾದ ಉಮಾದೇವಿ, ಪಾರ್ವತಿ, ಭೀಮವ್ವ, ರಮೇಶ ವಜ್ರಬಂಡಿ, ಶರಣಪ್ಪ ಪೂಜಾರ ಇತರರಿದ್ದರು.