ಜಿಲ್ಲೆ

ನ್ಯಾಯಾಂಗ ನಿಂದನೆ ಪ್ರಕರಣ ಹಿಂದಕ್ಕೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಕಾನೂನು ವಿದ್ಯಾರ್ಥಿ ಶ್ರೇಯಸ್​ ಮೂಲಿಮನಿ ತಪ್ಪು ದೂರಿನ ಮೇರೆಗೆ ಕರ್ನಾಟಕ ಕಾನೂನು ವಿಶ್ವ ವಿದ್ಯಾಲಯದ ಅಧಿಕಾರಿಗಳ ವಿರುದ್ಧ ಮಾಡಿದ ಆರೋಪಕ್ಕೆ ಕ್ಷಮೆಯಾಚಿಸುವುದಾಗಿ ಕರ್ನಾಟಕ ಕಾನೂನು ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ. ಮಂಜುನಾಥ ಹೊಂಗಲದ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೇಯಸ್​ ದೂರಿನ ಮೇರೆಗೆ ವಿವಿ ನಿರ್ದೇಶಕಿ ರತ್ನಾ ಭರಭಮಗೌಡರ ಹಾಗೂ ಮೌಲ್ಯಮಾಪನ ಕುಲಸಚಿವೆ ಗೀತಾ ಕೌಲಗಿ ಮೇಲೆ ಆರೋಪಿಸಲಾಗಿತ್ತು. ಆದರೆ ವಿದ್ಯಾರ್ಥಿರ್ಯೇ ತಪ್ಪು ದೂರು ನೀಡಿದ್ದಾನೆ ಎಂಬುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಕ್ಷಮೆಯಾಚನೆ ಜತೆಗೆ ಇವರ ಮೇಲೆ ದಾಖಲಿಸಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನೂ ಹಿಂಪಡೆಯಲಾಗಿದೆ ಎಂದರು.