ಭಟ್ಕಳ: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟ ಹಿನ್ನೆಲೆಯಲ್ಲಿ ವಾಹನ ಚಾಲಕರು ರಸ್ತೆ ಮಧ್ಯ ವಾಹನ ಟೈರ್ ಇಟ್ಟು ಅದರ ಮೇಲೆ ಗಿಡ ನೆಟ್ಟು ಗತಿ ಗೆಟ್ಟ ಸರ್ಕಾರ ಕ್ಕೆ ಧಿಕ್ಕಾರ ಎಂದು ಸ್ಲೋಗನ್ ಅಂಟಿಸಿ ಆಕ್ರೋಶ ಹೊರಹಾಕಿದರು.
ಪ್ರತಿನಿತ್ಯ ಸಾವಿರಾರು ರೋಗಿಗಳು, ವಿದ್ಯಾರ್ಥಿಗಳು ತೆರಳುವ ರಸ್ತೆಯಲ್ಲಿ ಎಲ್ಲೆಂದರಲ್ಲಿ ಸಣ್ಣ ಸಣ್ಣ ಹೊಂಡಗಳು, ಕಿತ್ತು ಹೋಗಿರುವ ಡಾಂಬರ್, ಚದುರಿರುವ ಜಲ್ಲಿ ಕಲ್ಲುಗಳು, ಮಳೆ ಬಂದರೆ ಕೃತಕ ಈಜುಕೊಳ ನಿರ್ವಣವಾಗುತ್ತಿದೆ. ರಸ್ತೆಗಳ ಹೊಂಡ ತಪ್ಪಿಸಲು ಹೋಗಿ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬೀಳುವುದು ಸರ್ವೆ ಸಾಮಾನ್ಯವಾಗಿದೆ. ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವಾಗ ಆಟೋ ಚಾಲಕ ಪರಿಸ್ಥಿತಿ ಹೇಳ ತೀರದಾಗಿದೆ. ರಸ್ತೆ ದುರಸ್ತಿ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಹಾಗೂ ಜನ ಪ್ರತಿನಿಧಿಗಳಿಗೆ ಮನವಿ ನೀಡಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ವಾಹನ ಸವಾರರು ಅಕ್ರೋಶ ವ್ಯಕ್ತಪಡಿಸಿದರು.