ಉಡುಪಿ: ಕಳೆದ 7 ತಿಂಗಳಿಂದ ಬಾಕಿ ಇರುವ ಸರ್ಕಾರದ 5 ರೂ. ಪ್ರೋತ್ಸಾಹಧನ ತಕ್ಷಣ ಬಿಡುಗಡೆ ಮಾಡಬೇಕು. ಹಾಲು ಒಕ್ಕೂಟದಿಂದ ಹಾಲು ಉತ್ಪಾದಕರ ಸಂಘಕ್ಕೆ ನೀಡುತ್ತಿದ ಲಾಭಾಂಶ ಪ್ರತಿ ಲೀಟರ್ಗೆ ಕನಿಷ್ಠ 50 ಪೈಸೆ ಏರಿಸಬೇಕು. ರೈತರು ಪೂರೈಸುವ ಲೀಟರ್ ಹಾಲಿನಲ್ಲಿ 5 ಪೈಸೆ ರೈತ ಕಲ್ಯಾಣ ಟ್ರಸ್ಟ್ ಹಾಗೂ 5 ಪೈಸೆ ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್ಗೆ ಪಾವತಿಸಬೇಕು ಎಂದು ಅಜ್ಜರಕಾಡು ಪುರಭವನದಲ್ಲಿ ಗುರುವಾರ ನಡೆದ ಜಿಲ್ಲಾ ಹೈನುಗಾರರ ಪರಿವಾರ ಒಕ್ಕೂಟದ ಸಮಾಲೋಚನ ಸಭೆಯಲ್ಲಿ ರ್ನಿಣಯಕೈಗೊಳ್ಳಲಾಯಿತು.
ಹೊರಜಿಲ್ಲೆಗೆ ಅನಧಿಕೃತವಾಗಿ ಜಾನುವಾರು ಸಾಗಾಟಕ್ಕೆ ಕಡಿವಾಣ ಹಾಕಬೇಕು. ಹಾಲು ಉತ್ಪಾದಕ ಸಂಗಳಿಗೆ ಏಕರೂಪ ತಂತ್ರಾಂಶದ ಸಾಧಕ&ಬಾಧಕಗಳ ತರಬೇತಿ ನೀಡದೆ ಒತ್ತಾಯಪೂರ್ವಕವಾಗಿ ಅಳವಡಿಸುವುದನ್ನು ನಿಲ್ಲಿಸಬೇಕು. ಗುಣಮಟ್ಟದ ರಸಮೇವು ಪೂರೈಸುವುದು, ರೈತರು, ಸಿಬ್ಬಂದಿಗೆ ಗುಂಪು ಆರೋಗ್ಯ ವಿಮೆ ಒದಗಿಸಲು ಒತ್ತಾಯಿಸಲಾಯಿತು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ವಿಶೇಷ ವಲಯ ಎಂದು ಪರಿಗಣಿಸಿ ಈ ಹಿಂದೆ ಸರ್ಕಾರ ಹಾಲು ಮತ್ತು ಕೆಎಂಫ್ ಉತ್ಪನ್ನಗಳಿಗೆ 2 ರೂ. ಮಾರಾಟ ದರವನ್ನು ಹೆಚ್ಚಿಸಿತ್ತು. ಪುನ@ ಮಾರಾಟ ದರ 2 ರೂ. ಹೆಚ್ಚಿಸಿ, ಅದರ ಮೌಲ್ಯವನ್ನು ಹೈನುಗಾರರಿಗೆ ವರ್ಗಾಹಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಹೈನುಗಾರರು ಬೇಡಿಕೆ ಮಂಡಿಸಿದರು.
ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷರಾದ ಶೇಡಿಕೋಡ್ಲು ವಿಟ್ಠಲ ಶೆಟ್ಟಿ ಮಂದಾರ್ತಿ, ಸಾಸ್ತಾನ ಜಗದೀಶ ಕಾರಂತ, ಕೆ. ರವಿರಾಜ್ ಶೆಟ್ಟಿ ಉಪಸ್ಥಿತರಿದ್ದರು. ಸಬ್ಲಾಡಿ ಮಂಜಯ್ಯ ಶೆಟ್ಟಿ ಸ್ವಾಗತಿಸಿದರು. ಅಶೋಕ್ ಕುಮಾರ್ ಶೆಟ್ಟಿ ನಿರೂಪಿಸಿದರು.