ಜಿಲ್ಲೆ

ಮಂದಾರ್ತಿ ಕಾಲೇಜಿನಲ್ಲಿ ಸಮಾಲೋಚನಾ ಸಭೆ

ಕೊಕ್ಕರ್ಣೆ: ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರಿ ಟೆಂಪಲ್ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಸಮಾಲೋಚನಾ ಸಭೆ ನಡೆಯಿತು.

ಪ್ರಾಂಶುಪಾಲ ಪ್ರವೀಣ್ ಶೆಟ್ಟಿ ಮಾತನಾಡಿ, ಕಾಲೇಜು ಪ್ರಾರಂಭವಾಗಿ 25 ವರ್ಷ ಪೂರೈಸಿದ್ದು, ರಜತ ಮಹೋತ್ಸವ ಆಚರಿಸಲಾಗುವುದು. ಕಾಲೇಜಿನ ವಿದ್ಯಾರ್ಥಿಗಳು ಪ್ರತೀ ವರ್ಷವೂ ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈದಿದ್ದಾರೆ. ಈ ಬಾರಿ ಶೇ.100 ಫಲಿತಾಂಶಕ್ಕೆ ಶ್ರಮಿಸಲಾಗುತ್ತಿದೆ ಎಂದರು. ಉಪನ್ಯಾಸಕ ವೃಂದ, ಪಾಲಕರು ಉಪಸ್ಥಿತರಿದ್ದರು. ಉಪನ್ಯಾಸಕ ಕೃಷ್ಣ ಸ್ವಾಗತಿಸಿದರು. ಉಪನ್ಯಾಸಕ ನಿತ್ಯಾನಂದ ಶೆಟ್ಟಿ ವಂದಿಸಿದರು. ಉಪನ್ಯಾಸಕಿ ಶ್ವೇತಾ ನಿರೂಪಿಸಿರು.