ರಾಯಚೂರಿನ ಹೊರವಲಯದ ಅಸ್ಕಿಹಾಳ ಸೀಮಾಂತರದ ನಾರಾಯಣಪುರ ಬಲದಂಡೆ ಕಾಲುವೆಗೆ ನೀರು ಹರಿಸಿದ್ದರಿಂದ ಶನಿವಾರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿರುವುದು. 
ಜಿಲ್ಲೆ

ನಿರ್ಮಾಣ ಹಂತದ ಕಾಲುವೆಗೆ ನೀರು ಕೆನಾಲ್ ಒಡೆದು ಜಮೀನುಗಳಿಗೆ ನುಗ್ಗಿದ ನೀರು

Raichur

ರಾಯಚೂರು: ರಾಯಚೂರಿನ ಹೊರವಲಯದ ಅಸ್ಕಿಹಾಳ ಸೀಮಾಂತರದಲ್ಲಿ ನಿರ್ಮಾಣ ಹಂತದ ನಾರಾಯಣಪುರ ಬಲದಂಡೆ ಕಾಲುವೆಗೆ ನೀರು ಹರಿಸಿದ್ದರಿಂದ ಶನಿವಾರ ಕಾಲುವೆ ಒಡೆದು ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.

ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಯನ್ನು 95 ಕಿ.ಮೀ.ನಿಂದ 155 ಕಿ.ಮೀ.ವರೆಗೆ ವಿಸ್ತರಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಕೆಬಿಜೆಎನ್‌ಎಲ್ ಅಧಿಕಾರಿಗಳ ನಿರ್ಲಕ್ಷೃದಿಂದ ನಿರ್ಮಾಣ ಹಂತದ ಕಾಲುವೆಗೆ ನೀರು ಹರಿಸಲಾಗಿದೆ.

ಅಸ್ಕಿಹಾಳ ಹೊರವಲಯದ ಕಾಲುವೆಗೆ ಮಳೆ ನೀರು ಹರಿದು ಬರದಂತೆ ಮಣ್ಣು ಹಾಕಲಾಗಿದ್ದು, ಕಾಲುವೆಗೆ ನೀರು ಹರಿಸಿದ್ದರಿಂದ ನೀರು ಕಾಲುವೆಯಲ್ಲಿ ಹರಿಯದೆ ಜಮೀನುಗಳಿಗೆ ನುಗ್ಗಿದ್ದರಿಂದ ಭತ್ತ, ಹತ್ತಿ ಬೆಳೆಗಳು ಹಾನಿಗೊಳಗಾಗಿವೆ.

ಕಟಾವಿಗೆ ಬಂದಿದ್ದ ಸುಮಾರು 30 ಎಕರೆ ಪ್ರದೇಶದಲ್ಲಿನ ಭತ್ತ ಹಾಗೂ ಹತ್ತಿ ಬೆಳೆ ಹಾನಿಗೊಳಗಾಗಿದೆ. ಕೆಬಿಜೆಎನ್‌ಎಲ್ ಅಧಿಕಾರಿಗಳ ನಿರ್ಲಕ್ಷೃಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿ, ಬೆಳೆ ಹಾನಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.