ಜಿಲ್ಲೆ

ವಿಶ್ರಾಂತಿ ಕೇಂದ್ರ ಸಮುದ್ರಪಾಲು : ಕೋಟಿ ರೂ. ವೆಚ್ಚದಲ್ಲಿ ಕಣ್ವತೀರ್ಥ ಕಡಲತೀರದಲ್ಲಿ ನಿರ್ಮಾಣ

ವಿಜಯವಾಣಿ ಸುದ್ದಿಜಾಲ ಮಂಜೇಶ್ವರ ಕೇರಳ ಸರ್ಕಾರ ಮಂಜೇಶ್ವರದ ಕಣ್ವತೀರ್ಥ ಕಡಲ ತೀರದಲ್ಲಿ ಪ್ರವಾಸಿಗರಿಗಾಗಿ ಕೋಟಿಗಟ್ಟಲೆ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ವಿಶ್ರಾಂತಿ ಕೇಂದ್ರದ ಒಂದು ಭಾಗ ಇತ್ತೀಚೆಗೆ ಸಂಭವಿಸಿದ ಸಮುದ್ರಕೊರೆತದಿಂದಾಗಿ ಸಮುದ್ರ ಪಾಲಾಗಿದೆ. 1 ಕೋಟಿ 15 ಲಕ್ಷ ರೂ. ವೆಚ್ಚದಲ್ಲಿ ಜಿಲ್ಲಾ ಟೂರಿಸಂ ಪ್ರೋತ್ಸಾಹನ ಮಂಡಳಿ ಮೂಲಕ ಈ ವಿಶ್ರಾಂತಿ ಕೇಂದ್ರವನ್ನು ನಿರ್ಮಿಸಲಾಗುತ್ತಿತ್ತು. 2023ರಲ್ಲೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಹಲವು ತಡೆಗಳ ಕಾರಣದಿಂದ ನಿರ್ಮಾಣ ಕಾರ್ಯ ವಿಳಂಬವಾಗಿದೆ. ಶೇ.60ರಷ್ಟು ಕಾಮಗಾರಿ ಪೂರ್ಣಗೊಂಡಿತ್ತು. ಈ ಹಂತದವರೆಗೆ 89 ಲಕ್ಷ ರೂ. ವೆಚ್ಚವಾಗಿದ್ದು, ಉಳಿದ ಮೊತ್ತ ತೆರಿಗೆಗಳಿಗೆ ವಿನಿಯೋಗಿಸಲಾಗಿದೆ. ತೆರಿಗೆ ಹಣ ಪೋಲು ಈ ಪ್ರದೇಶ ಸಿಆರ್‌ಜಡ್ ವ್ಯಾಪ್ತಿಗೆ ಒಳಪಟ್ಟಿದ್ದು, ಇಲ್ಲಿ ಮನೆ ಕಟ್ಟಲೂ ಸರ್ಕಾರದ ಅನುಮತಿ, ಡೋರ್ ನಂಬರ್ ಪಡೆಯಲು ಎ.11 ಕಾನೂನು ಬಹುಮುಖ್ಯ ಪ್ರಕ್ರಿಯೆಗಳಾಗಿ ಪರಿಗಣಿಸಲಾಗುತ್ತದೆ. ಇಂತಹ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಸಮುದ್ರದ ಅಟ್ಟಹಾಸ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಗೋಚರಿಸುತ್ತಿರುವಾಗಲೂ ಯಾವುದೇ ಸಮಗ್ರ ಅಧ್ಯಯನ, ಭೂಗರ್ಭ ಅಧ್ಯಯನ ಅಥವಾ ಸಮುದ್ರಕೊರೆತ ಭೀತಿಯ ತೀವ್ರತೆಯ ವರದಿ ಇಲ್ಲದೆ ಪ್ರವಾಸೋದ್ಯಮದ ಹೆಸರಿನಲ್ಲಿ ದೊಡ್ಡ ಹೂಡಿಕೆಗೆ ನಿರ್ಧಾರ ತೆಗೆದುಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಮಂಜೇಶ್ವರದ ಜನರು ದೀರ್ಘ ಕಾಲದಿಂದ ಬೀಚ್ ಪ್ರವಾಸೋದ್ಯಮದ ಕನಸು ಕಾಣುತ್ತಿದ್ದಾರೆ ಎಂಬುದು ನಿಜ. ಆದರೆ ಈ ಕನಸುಗಳನ್ನು ಸಾಕಾರಗೊಳಿಸುವ ಪ್ರಕ್ರಿಯೆಯಲ್ಲಿ ಸೂಕ್ತ ಯೋಜನೆ, ಪರಿಸರ ಭದ್ರತೆ ಹಾಗೂ ಭವಿಷ್ಯದ ಹಾನಿಗಳಿಗೆ ತಕ್ಕ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಸಂಬಂಧಪಟ್ಟ ಇಲಾಖೆಯ ಹೊಣೆಗಾರಿಕೆ. ಆದರೂ ಇದು ವಾಸ್ತವದಲ್ಲಿ ಸಂಭವಿಸಿಲ್ಲ ಎಂಬುದನ್ನು ಇತ್ತೀಚಿನ ಅನಾಹುತ ಪೂರಕವಾಗಿ ಸಾರುತ್ತಿದೆ. ಅಬ್ದುಲ್ ಜಬ್ಬಾರ್ ಬಹರೈನ್ ಸಾಮಾಜಿಕ ಕಾರ್ಯಕರ್ತ https://www.vijayavani.net/inauguration-of-educational-associations-2 https://www.vijayavani.net/farming-by-farmers-of-east-eleri-kodombelur-panchayat