Construction of rooms with a grant of Rs. crore 
ಜಿಲ್ಲೆ

ಕೋಟಿ ರೂ. ಅನುದಾನದಲ್ಲಿ ಕೊಠಡಿಗಳ ನಿರ್ಮಾಣ

ವಿಜಯಪುರ : ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ 4 ಹೊಸ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬುಧವಾರ ಭೂಮಿಪೂಜೆ ನೆರವೇರಿಸಿದರು.

2022&23ನೇ ಸಾಲಿನ ಜಿ.ಪಂ. ವಿವೇಕ ಶಾಲಾ ಕೊಠಡಿ ಯೋಜನೆಯಡಿ 1 ಕೋಟಿ ರೂ. ಗಳ ಅನುದಾನದಲ್ಲಿ ಹೊಸದಾಗಿ 4 ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಣ ಕಲ್ಪಿಸುವ ಜತೆಗೆ ಇನ್ನೂ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.

ಕಾಲೇಜು ಸಿಬ್ಬಂದಿಗಳು ಶಾಸಕ ಯತ್ನಾಳರನ್ನು ಸನ್ಮಾನಿಸಿದರು. ಮುಖಂಡರಾದ ಪಾಂಡು ಸಾಹುಕಾರ ದೊಡಮನಿ, ಸಾಯಿಬಣ್ಣ ಭೋವಿ, ಮಡಿವಾಳ ಯಾಳವಾರ, ಸಂತೋಷ ಪಾಟೀಲ, ಮಲ್ಲಮ್ಮ ಜೋಗೂರ ಮತ್ತಿತರರಿದ್ದರು.