ಜಿಲ್ಲೆ

ಚಾರ್ವಾಕದಲ್ಲಿ ಮನೆ ನಿರ್ಮಾಣಕ್ಕೆ ಚಾಲನೆ : ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಸೇವೆ

ಸೌಮ್ಯ ಆರ್

ಕಡಬ: ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ, ಕುಟ್ರುಪ್ಪಾಡಿ ಮಹಾಶಕ್ತಿ ಕೇಂದ್ರ, ಚಾರ್ವಾಕ ಶಕ್ತಿಕೇಂದ್ರ ನೇತೃತ್ವದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಸೇವಾಪಾಕ್ಷಿಕ-2024ರ ಅಂಗವಾಗಿ ನೂತನ ಮನೆ ನಿರ್ಮಾಣಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು.

ಚಾರ್ವಾಕ ಗ್ರಾಮದ ಬಾಂತೋಡು ನಿವಾಸಿ ಪುಟ್ಟಣ್ಣ ದಂಪತಿಗೆ ಮನೆ ನಿರ್ಮಿಸಲು ಕಾರ್ಯಕರ್ತ ಬೆಳಿಯಪ್ಪ ದೇವರಮಾರು ದೀಪ ಬೆಳಗಿಸಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ಸೇವಾ ಪಾಕ್ಷಿಕದ ಜಿಲ್ಲಾ ಸಂಚಾಲಕ ರಾಕೇಶ್ ರೈ ಕೆಡೆಂಜಿ ಗುದ್ದಲಿಪೂಜೆ ನೆರವೇರಿಸಿದರು.

ಜಿಲ್ಲಾ ಕಾರ್ಯಕಾರಿಣಿ ಸದಸ್ಯ ದಿನೇಶ್ ಮೆದು, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ, ಮಂಡಲ ಕಾರ್ಯದರ್ಶಿ ಗಣೇಶ್ ಉದನಡ್ಕ, ಮಂಡಲ ಸದಸ್ಯರಾದ ತಾರಾನಾಥ ಕಾಯರ್ಗ, ಧನಂಜಯ ಕೇನಾಜೆ, ಚಾರ್ವಾಕ ಶಕ್ತಿ ಕೇಂದ್ರ ಪ್ರಮುಖ್ ಸತ್ಯನಾರಾಯಣ ಕಲ್ಲೂರಾಯ, ಪುಣ್ಚಪಾಡಿ ಶಕ್ತಿ ಕೇಂದ್ರ ಪ್ರಮುಖ್ ಮಹೇಶ್ ಕೆ, ಕಾಣಿಯೂರು ಗ್ರಾಪಂ ಅಧ್ಯಕ್ಷ ವಿಶ್ವನಾಥ ಕೊಪ್ಪ, ಚಾರ್ವಾಕ ದೇವಾಲಯ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೊರಗಪ್ಪ ಕುಕ್ಕುನಡ್ಕ, ಚಾರ್ವಾಕ ಬೂತ್ ಸಮಿತಿ ಅಧ್ಯಕ್ಷ ವಿಶ್ವನಾಥ ದೇವಿನಗರ, ನಾಣಿಲ ಬೂತ್ ಸಮಿತಿ ಅಧ್ಯಕ್ಷ ವಿಶ್ವನಾಥ ಖಂಡಿಗ, ಚಾರ್ವಾಕ ಎಸ್‌ಡಿಎಂಸಿ ಅಧ್ಯಕ್ಷ ಲೋಕೇಶ್ ಎಣ್ಮೂರು, ನಾಣಿಲ ಎಸ್‌ಡಿಎಂಸಿ ಅಧ್ಯಕ್ಷ ವಸಂತ ದಲಾರಿ ಮೊದಲಾದವರು ಇದ್ದರು. ಮಂಡಲ ಕಾರ್ಯದರ್ಶಿ ಗಣೇಶ್ ಉದನಡ್ಕ ಸ್ವಾಗತಿಸಿದರು. ಧನಂಜಯ ಕೇನಾಜೆ ವಂದಿಸಿದರು.