ಜಿಲ್ಲೆ

ಬೇಡಿಕೆಯಂತೆ ಬಸ್ ತಂಗುದಾಣ ನಿರ್ಮಾಣ

ಪ್ರಶಾಂತ ಹೂಗಾರ

ಐನಾಪುರ: ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಐದು ಬಸ್ ತಂಗುದಾಣ, ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಸಂಸದರ ಪ್ರದೇಶಾಭಿವೃದ್ಧಿ ನಿ ಅನುದಾನದಲ್ಲಿ ಬಸ್ ತಂಗುದಾಣ ಉದ್ಘಾಟಿಸಲಾಯಿತು. ಸಂಸದ ಅಣ್ಣಾಸಾಹೇಬ ಜೊಲ್ಲೆ, ಶ್ರೀನಿವಾಸ ಪಾಟೀಲ, ರೂಪಾ ಕಾಂಬಳೆ, ದೀಪಕ ಪಾಟೀಲ ಇತರರಿದ್ದರು.

ಕಾಗವಾಡ ತಾಲೂಕಿನ ಮೋಳೆ, ಕೆಂಪವಾಡ ಮತ್ತು ಖಿಳೇಗಾಂವ ಗ್ರಾಮಗಳಲ್ಲಿ ಸಂಸದರ ಪ್ರದೇಶಾಭಿವೃದ್ಧಿ ನಿಯಡಿ ನಿರ್ಮಿಸಿದ ಬಸ್ ತಂಗುದಾಣ ಉದ್ಘಾಟಿಸಿ ಮೋಳೆ ಗ್ರಾಮದಲ್ಲಿ ಮಾತನಾಡಿದರು.

2021-22ನೇ ಸಾಲಿನ ಸಂಸದರ ಪ್ರದೇಶ ಅಭಿವೃದ್ಧಿ ಯೋಜನೆ ಅಡಿ ಕಾಗವಾಡ ಪಟ್ಟಣದಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ. ಮೋಳೆ ಗ್ರಾಮದ ಹನುಮಾನ ಮಂದಿರದ ಅಭಿವೃದ್ಧಿಗೆ 10 ಲಕ್ಷ ರೂ. ಅನುದಾನ ನೀಡಿದ್ದರಿಂದ ದೇವಸ್ಥಾನ ಕಮಿಟಿ ಸದಸ್ಯರು ಸಂಸದರನ್ನು ಸತ್ಕರಿಸಿದರು.

ಗ್ರಾಪಂ ಅಧ್ಯಕ್ಷೆ ರೂಪಾ ಕಾಂಬಳೆ, ಯುವ ಮುಖಂಡ ಶ್ರೀನಿವಾಸ ಪಾಟೀಲ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ದೀಪಕ ಪಾಟೀಲ, ತಮ್ಮಣ್ಣ ಪಾರಶೆಟ್ಟಿ, ಗೋರಖನಾಥ ಕೋಳೆಕರ, ಭೂತಾಳಿ ಥರಥರೆ, ಪಿಂಟು ಮುಂಜೆ, ಸುಧಾಕರ ಚೋರಮೂಲೆ, ಸಿದ್ದು ಹವಳೆ, ಅಪ್ಪಾಸಾಬ ಮಳಮಳಸಿ, ಸಂದೀಪ ನಲವಡೆ, ಗುತ್ತಿಗೆದಾರ ಮಹಾಂತೇಶ ಚೌಗಲಾ, ಸಿದ್ದು ಸೊಂದಕರ ಇತರರಿದ್ದರು.