ಶ್ರೀರಂಗಪಟ್ಟಣ : ತಾಲೂಕಿನ ಬೆಳವಾಡಿ ಸರ್ವೇ ನಂ.64 ರಲ್ಲಿ ಅರಣ್ಯ ಪ್ರದೇಶದ ಉದ್ದೇಶಕ್ಕೆ ಮೀಸಲಿಟ್ಟಿರುವ 23 ಎಕರೆ ಜಮೀನಿನಲ್ಲಿ ಪ್ರಭಾವಿಗಳ ಬೃಹತ್ ಖಾಸಗಿ ಬಡಾವಣೆ ನಿರ್ಮಾಣಗುತ್ತಿದೆ. ತಾಲೂಕು ಆಡಳಿತ ಈ ಬಗ್ಗೆ ಕ್ರಮವಹಿಸುವ ಜತೆಗೆ ಸ್ಥಳದ ಮಾಹಿತಿ ಒದಗಿಸಬೇಕು ಎಂದು ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಆಗ್ರಹಿಸಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ಶಿರಸ್ತೇದಾರ್ ಪ್ರಸನ್ನ ಅವರಿಗೆ ಮನವಿ ಸಲ್ಲಿಸಿ ಬಳಿಕ ಮಾತನಾಡಿದರು.
ತಾಲೂಕಿನ ಕೆಲ ಗ್ರಾಮ ಪಂಚಾಯಿತಿಗಳು ಮೈಸೂರು ನಗರಕ್ಕೆ ತೀರ ಸಮೀಪದಲ್ಲಿದೆ. ಈ ಪಂಚಾಯಿತಿ ವ್ಯಾಪ್ತಿಯ ಸಾಕಷ್ಟು ಸರ್ಕಾರಿ ಭೂಮಿಗಳು, ಗೋಮಾಳ ಹಾಗೂ ಅರಣ್ಯ ಭೂಮಿಗಳು ಅಕ್ರಮವಾಗಿ ಅತಿಕ್ರಮವಾಗಿದೆ. ಈ ಜತೆಗೆ ಅನೀಕೃತ ಉದ್ಯಮ ಹಾಗೂ ಖಾಸಗಿ ಬಡಾವಣೆಗಳಾಗಿ ಈ ಪ್ರದೇಶ ಮಾರ್ಪಾಡುಗೊಳ್ಳುತ್ತಿವೆ ಎಂದು ದೂರಿದರು.
ಇದಕ್ಕೆ ಸಾಕ್ಷಿ ಎಂಬಂತೆ ಪಹಣಿಯೊಂದಿಗೆ ಅಕೃತ ದಾಖಲೆಗಳಿರುವ ಬೆಳವಾಡಿ ಸರ್ವೇ ನಂ.64ರಲ್ಲಿ ಅರಣ್ಯ ಪ್ರದೇಶದ ಉದ್ದೇಶಕ್ಕೆ ಸಾಕಷ್ಟು ವರ್ಷಗಳಿಂದ ಖಾಲಿ ಬಿಟ್ಟಿದ್ದ ಕೋಟ್ಯಾಂತರ ಬೆಲೆಬಾಳುವ 23 ಎಕರೆ ಭೂಮಿಯಲ್ಲಿ ಖಾಸಗಿ ಕಂಪನಿಯು ಸದ್ದಿಲ್ಲದೆ ಬೃಹತ್ ಲೇಔಟ್ ನಿರ್ಮಾಣ ಮಾಡುತ್ತಿದೆ. ಇದರೊಂದಿಗೆ ತಾಲೂಕಿನ ಬೆಳಗೊಳ, ಬಸ್ತೀಪುರ ಸೇರಿದಂತೆ ಮೈಸೂರು ನಗರಕ್ಕೆ ಸಮೀಪದ ತಾಲೂಕಿನ ಸರ್ಕಾರಿ ಭೂಮಿಗಳು ಕಣ್ಮರೆಯಾಗುತ್ತಿದೆ. ಕೃಷಿಯ ಅನುಭವದಲ್ಲಿದ್ದಾರೆ ಎಂದು ರೈತರ ಹೆಸರಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಳಿಕ ಕೊಂಡುಕೊಳ್ಳುವ ಪ್ರಕ್ರಿಯೆ ನಡೆದಿದೆ ಎಂದು ಆರೋಪಿಸಿದರು.
ಇಷ್ಟೆಲ್ಲ ಅಕ್ರಮ ನಡೆಯುತ್ತಿದ್ದರೂ ರಾಜಸ್ವ ನೀರಿಕ್ಷಕರು, ಗ್ರಾಮೀಣ, ಕಂದಾಯ ಇಲಾಖೆಯ ಅಕಾರಿಗಳು ಪ್ರಶ್ನಿಸದೆ. ಜಾಣ ಕುರುಡು ವೌನ ವಹಿಸಿದ್ದಾರೆ. ಇದು ಆತಂಕ ತರಿಸಿದ್ದು, ಭೂಗಳ್ಳರೊಂದಿಗೆ ತಾಲೂಕು ಆಡಳಿತದ ಕೆಲವು ಅಕಾರಿಗಳು ಶಾಮೀಲಾಗಿ ಲೂಟಿಗೆ ನಿಂತಿರುವ ಅನುಮಾನವಿದೆ. ಇದಕ್ಕೆ ಪೂರಕವಾಗಿ ಆಯಾ ಕಾಲದಲ್ಲಿ ಕ್ಷೇತ್ರದ ಜನಪ್ರತಿನಿಗಳು ಸಹ ಭೂಮಾಫಿಯಾದ ರಕ್ಷಣೆಗೆ ನಿಂತಿದ್ದಾರೆ ಎಂದು ಆಪಾದಿಸಿದರು.
ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಉಪಾಧ್ಯಕ್ಷ ಜಯರಾಮೇಗೌಡ, ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಕೆಆರ್‌ಎಸ್ ಪುಟ್ಟಮಾದು, ಸಲಹೆಗಾರ ಹೊಸಹಳ್ಳಿ ಸ್ವಾಮಿ, ಸಂಚಾಲಕ ಡಿ.ಮಂಜುನಾಥ್, ದರಸಗುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷ ರವಿ ಲಕ್ಷ್ಮಣ, ಚಿಂದಗಿರಿ ರಾಮಚಂದ್ರು, ಹೆಬ್ಬಾಡಿಹುಂಡಿ ಸಿದ್ದೇಗೌಡ, ಪಾಲಹಳ್ಳಿ ರಾಮಚಂದ್ರು, ಕಪರನಕೊಪ್ಪಲು ಸುರೇಶ್ ಇದ್ದರು.