ಶ್ರೀರಂಗಪಟ್ಟಣ: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅವರ ಸುವರ್ಣ ಪುತ್ಥಳಿಗೆ ಗುಣಮಟ್ಟದ ಕಾಮಗಾರಿ ನಡೆಸುವ ಮೂಲಕ ಶೀಘ್ರದಲ್ಲೇ ಗೋಪುರ ನಿರ್ಮಿಸಲಾಗುತ್ತದೆ ಎಂದು ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಅಂಬೇಡ್ಕರ್ ಪುತ್ಥಳಿ ಗೋಪುರ ನಿರ್ಮಾಣ ಕಾಮಗಾರಿಗೆ ತಾಲೂಕು ಆಡಳಿತದ ಅಧಿಕಾರಿಗಳೊಂದಿಗೆ ಚಾಲನೆ ನೀಡಿ ಮಾತನಾಡಿದರು.
ಭಾರತದಲ್ಲಿ ಸಂವಿಧಾನದ ಮೂಲಕ ಪ್ರಜಾತತ್ಮಕ ಆಡಳಿತದ ಕೊಡುಗೆ ನೀಡಿದ ಬಾಬಾ ಸಾಹೇಬರಿಗೆ ಗೌರವ ಪೂರ್ವಕ ಸ್ಮರಣಾರ್ಥ ಪುತ್ಥಳಿ ನಿರ್ಮಿಸಲಾಗಿದೆ. ಇದೀಗ ಪುರಸಭೆ ಯೋಜನೆಯ 4.7ಲಕ್ಷ ರೂ. ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ ಯಿಂದ ಗೋಪುರ ನಿರ್ಮಿಸುವ ಮೂಲಕ ಪುತ್ಥಳಿಗೆ ಬಿಸಿಲು-ಮಳೆಯಿಂದ ರಕ್ಷಣೆ ಒದಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಸಾಕಷ್ಟು ಸಂಘಟನೆಗಳು ಸಹ ಜಾತ್ಯತೀತವಾಗಿ ಮನವಿ ಮಾಡಿದ್ದರು ಎಂದರು.
ತಹಸೀಲ್ದಾರ್ ಪರಶುರಾಂ, ತಾಪಂ ಇಒ ವೇಣು, ಇನ್‌ಸ್ಪೆಕ್ಟರ್ ಬಿ.ಎಸ್.ಪ್ರಕಾಶ್, ಎಇಇ ಜಸ್ವಂತ್ ಪಂಡಿತ್, ಸಹಾಯಕ ಇಂಜಿನಿಯರ್ ರವಿಕುಮಾರ್, ಯತೀಶ್ ಕುಮಾರ್, ನಂಜಪ್ಪಚಾರಿ, ಪ್ರಥಮ ದರ್ಜೆ ಸಹಾಯಕ ಮುದ್ದೇಗೌಡ, ಅಪೆಕ್ಸ್ ಬ್ಯಾಂಕ್ ಮಾಜಿ ನಿರ್ದೇಶಕ ಶಿವಯ್ಯ, ಕಾಂಗ್ರೆಸ್ ಮುಖಂಡ ಹುರುಳಿಕ್ಯಾತನಹಳ್ಳಿ ಶಿವಕುಮಾರ್, ದಸಂಸ ಮುಖಂಡರಾದ ಪಾಂಡು, ಗಂಜಾಂ ರವಿಚಂದ್ರು, ಬೆಳಗೊಳ ಬಸವಯ್ಯ, ಕೆ.ಶೆಟ್ಟಹಳ್ಳಿ ಸುರೇಶ್, ಮುಂಡುಗದೊರೆ ಮೋಹನ್, ಬಿ.ಆರ್.ಕೊಪ್ಪಲು ರಮೇಶ್, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಅಧ್ಯಕ್ಷ ಗೌಡಹಳ್ಳಿ ದೇವರಾಜು ಇತರರು ಈ ವೇಳೆ ಇದ್ದರು.