ಜಿಲ್ಲೆ

ಕುಸ್ತಿ ಅಂಕಣ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ

ತುಮಕೂರು: ಸ್ಮಾರ್ಟ್‌ಸಿಟಿ ಲಿಮಿಟೆಡ್ ಅನುದಾನದಡಿ ಕುಸ್ತಿ ಅಂಕಣ ಕಟ್ಟಡ ನಿರ್ಮಾಣಕ್ಕೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಶಂಕಸ್ಥಾಪನೆ ನೆರವೇರಿಸಿದರು.

ಮಹಾತ್ಮ ಗಾಂಧಿ ಕ್ರೀಡಾಂಗಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಸ್ಮಾರ್ಟ್‌ಸಿಟಿ ವತಿಯಿಂದ 60 ಕೋಟಿ ರೂ., ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಲಾಗುತ್ತಿದ್ದು, ಎಲ್ಲ ಮಕ್ಕಳಿಗೆ ಅದರಲ್ಲೂ ಗ್ರಾಮೀಣ ಭಾಗದ ಮಕ್ಕಳಿಗೆ ಉಪಯುಕ್ತವಾಗಲಿದೆ. 15 ವರ್ಷ ಒಳಪಟ್ಟ ಯುವಕ ಯುವತಿಯರಿಗೆ ಈ ಕ್ರೀಡಾಂಗಣ ವೀಸಲಾಗಿರಬೇಕು. ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಕೂಟ ನಡೆಸಲು ಉಪಯೋಗಿಸ ಬೇಕಾಗಿರುವುದರಿಂದ ಇದಕ್ಕೆ ಅಗತ್ಯ ಸೌಲಭ್ಯಗಳನ್ನ ಒದಗಿಸಬೇಕಾಗಿರುತ್ತದೆ. ವಾಯುವಿಹಾರಕ್ಕೆ ಅವಕಾಶವಿದೆ. ಇದಕ್ಕೆ 8 ರಿಂದ 12 ಅಡಿ ಟ್ರಾೃಕ್‌ನ್ನು ನಿರ್ಮಿಸಲಾಗುವುದು ಎಂದು ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.

ನಗರದಲ್ಲಿ ಈ ಹಿಂದೆ ಕುಸ್ತಿ ಅಂಕಣ ಇಲ್ಲದ ಕಾರಣ ಕುಸ್ತಿಪಟುಗಳು ಸಾಧನೆ ತೋರಲಾಗಲಿಲ್ಲ. ಉತ್ಕೃಷ್ಟ ದರ್ಜೆಯ ಕುಸ್ತಿ ಅಂಕಣ ಸಿದ್ಧಪಡಿಸುತ್ತಿದ್ದು, ಇದು ಕುಸ್ತಿ ಪಟುಗಳಿಗೆ ಹೆಚ್ಚಿನ ಅಭ್ಯಾಸಕ್ಕೆ ಅನುಕೂಲವಾಗಲಿದೆ. ಈ ಹಿಂದೆ ಎಲ್ಲ ರೀತಿಯ ಕ್ರೀಡೆಗಳ ಆತಿಥ್ಯವನ್ನು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಮಾಡಲಾಗುತ್ತಿತ್ತು. ಈಗ ಪ್ರತ್ಯೇಕ ಅಂಕಣಗಳನ್ನು ನಿರ್ಮಿಸುವ ಮೂಲಕ ಉತ್ತಮ ಕ್ರೀಡಾಕೂಟಗಳನ್ನು ಆಯೋಜಿಸಲು ಸಾಧ್ಯವಾಗಲಿದೆ ಎಂದರು.

ಮಹಾತ್ಮಗಾಂಧಿ ಕ್ರೀಡಾಂಗಣ ನಿರ್ಮಾಣ ಸಂಬಂಧ ಯಾವುದೇ ದೂರು, ಗೊಂದಲಗಳಿದ್ದರೆ ಅಥವಾ ಇನ್ನೂ ಏನಾದರೂ ಅವಶ್ಯವಿದ್ದರೆ, ನೇರವಾಗಿ ಸಭೆ ಕರೆದು ಚರ್ಚಿಸಿ ಸೂಕ್ತ ರೀತಿಯಲ್ಲಿ ಸರಿಪಡಿಸಲಾಗುವುದು. ನಗರದ ಕ್ರೀಡಾಪಟುಗಳಿಗೆ, ಸಾರ್ವಜನಿಕರಿಗೆ ಉಪಯುಕ್ತವಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಲು ಸಹಕರಿಸಬೇಕು ಎಂದು ಜ್ಯೋತಿಗಣೇಶ್ ತಿಳಿಸಿದರು. ಪಾಲಿಕೆ ಸದಸ್ಯರಾ ರೂಪ, ವಿ.ಎಸ್.ಗಿರಿಜಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜು, ಕ್ರೀಡಾ ತರಬೇತುದಾರರಾದ ಮೊಹಮ್ಮದ್ ಇಸ್ಮಾಯಿಲ್, ಸೈಮನ್ ವಿಕ್ಟರ್, ಸುಧೀರ್, ಸಾಲೋಮನ್ ಮತ್ತಿತರರು ಹಾಜರಿದ್ದರು.

ಕ್ರೀಡಾಪಟುಗಳಲ್ಲಿರುವ ಸಕಾರಾತ್ಮಕವಾದ ಚಿಂತನೆಗಳು ನಮಗೆ ಸ್ಫೂರ್ತಿ. ಜಿಲ್ಲೆಯ ಕ್ರಿಡಾಪಟುಗಳು ಸ್ಮಾರ್ಟ್‌ಸಿಟಿ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ಕ್ರೀಡಾಂಗಣವನ್ನು ಸದ್ಭಳಕೆ ಮಾಡಿಕೊಂಡರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಗೆ ಕೀರ್ತಿ ತರುವಂತಾಗಲಿ. ಫರಿದಾಬೇಗಂ ಮೇಯರ್