ವಿಜಯಪುರ:ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿರಿಸಿರುವ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು "ಶ್ವಾನ ಆರೈಕೆ ಕೇಂದ್ರ' ಸ್ಥಾಪನೆಗೆ ಸಿದ್ಧತೆ ನಡೆಸಿದ್ದಾರೆ.ಈಗಾಗಲೇ ಯೋಜನೆಯ ರೂಪುರೇಷೆ ಸಿದ್ಧಗೊಂಡಿದ್ದು, ಶ್ರೀದಲ್ಲೇ ಭೂಮಿ ಪೂಜೆ ನೆರವೇರಲಿದೆ. ರಾಜ್ಯದಲ್ಲೇ ಇದು ಎರಡನೇ ಕೇಂದ್ರವಾಗಲಿದ್ದು, ಬೆಂಗಳೂರು ಹೊರತುಪಡಿಸಿದರೆ ವಿಜಯಪುರವೇ ಶ್ವಾನಗಳ ಆರೈಕೆಯ ಕೇಂದ್ರ ಸ್ಥಾನವಾಗಲಿದೆ. ಈ ಕುರಿತು ಎರಡ್ಮೂರು ಸುತ್ತಿನ ಸಭೆಯೂ ಆಗಿದ್ದು, ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಅವರು ಸಿಎಸ್ಆರ್ ಅನುದಾನ ಒದಗಿಸುವ ಭರವಸೆ ನೀಡಿದ್ದಾಗಿ ಅಧಿಕಾರಿಗಳು ತಿಳಿಸುತ್ತಾರೆ.
* ಎರಡು ಎಕರೆ ಜಮೀನು
ನಗರ ಹೊರವಲಯದ ಬುರಾಣಪುರ ಬಳಿಯ ಸರ್ಕಾರಿ ಗೋಶಾಲೆ ಪಕ್ಕದಲ್ಲಿರುವ ಕಂದಾಯ ಇಲಾಖೆಯ 10 ಎಕರೆ ಜಾಗೆಯಲ್ಲಿಯೇ ಎರಡು ಎಕರೆ ಜಮೀನು ಶ್ವಾನ ಆರೈಕೆ ಕೇಂದ್ರಕ್ಕೆ ಮೀಸಲಿಡಲಾಗಿದೆ. ಅಂದಾಜು 2 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಅಂದಾಜು ಪತ್ರಿಕೆ ಸಿದ್ಧಪಡಿಸಲಾಗುತ್ತಿದ್ದು, ಇಂಜಿನಿಯರಿಂಗ್ ವಿಭಾಗಕ್ಕೆ ಡಿಪಿಆರ್ ಸಿದ್ಧಪಡಿಸಲು ತಿಳಿಸಲಾಗಿದೆ. ಪಶುಸಂಗೋಪನೆ ಇಲಾಖೆ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ನೇತೃತ್ವದಲ್ಲಿ ತಂಡವೊಂದು ಬೆಂಗಳೂರಿನ ಶ್ವಾನ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಲಿದೆ. ಕಟ್ಟಡ ನಿರ್ಮಾಣ, ಚಿಕಿತ್ಸಾ ಟಕಗಳು, ಆರೈಕೆ ವಿಭಾಗ ಸೇರಿ ಹಲವು ವಿಭಾಗಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಯೋಜನೆಯೊಂದು ಸಿದ್ಧಗೊಳ್ಳುತ್ತಿದೆ.
* ಹೆಚ್ಚುತ್ತಿರುವ ಶ್ವಾನ ಸಂತತಿ
ಜಿಲ್ಲೆ ಮಾತ್ರವಲ್ಲ ಇಡೀ ದೇಶಾದ್ಯಂತ ಶ್ವಾನಗಳ ಸಂತತಿ ಹೆಚ್ಚಾಗುತ್ತಿದೆ. ದೆಹಲಿಯಲ್ಲಿಯೂ ಶ್ವಾನಗಳ ಹಾವಳಿ ಹೆಚ್ಚಾಗಿ ಪ್ರಕರಣ ನ್ಯಾಯಾಲಯದ ಮಟ್ಟದಲ್ಲಿಯೂ ಚರ್ಚೆಯಾಗಿದೆ. ಪರಿಣಾಮ ನ್ಯಾಯಾಲಯದ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲಿ ಶ್ವಾನ ಆರೈಕೆ ಕೇಂದ್ರ ಸ್ಥಾಪಿಸಲು ಚಿಂತನೆ ನಡೆಯಿತು. ಈ ಕುರಿತು ಅನುದಾನದ ಬಗ್ಗೆ ಸಮಾಲೋಚಿಸಲಾಗಿ ರಾಜ್ಯ ಸಭೆ ಸದಸ್ಯೆ ಸುಧಾಮೂರ್ತಿ ಅವರು ಸಿಎಸ್ಆರ್ ಅನುದಾನದಡಿ ಹಣಕಾಸಿನ ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿದ ಪರಿಣಾಮ ಅಧಿಕಾರಿಗಳು ಕಾಯೋರ್ನ್ಮುಖರಾಗಿದ್ದಾರೆ.
ವಿಜಯಪುರ ನಗರವೊಂದರಲ್ಲೇ ಅಂದಾಜು 16 ಸಾವಿರ ಬೀದಿ ನಾಯಿಗಳಿವೆ. 2025ರ ಜನವರಿಯಿಂದ ಸೆ. 22 ರವರೆಗೆ 22970 ನಾಯಿ ಕಡಿತ ಪ್ರಕರಣಗಳು ಪತ್ತೆಯಾಗಿವೆ. ಈಗಾಗಲೇ ವಿಜಯಪುರ ಮಹಾನಗರ ಪಾಲಿಕೆಯಿಂದ ಕೋಟಿ ರೂ. ಅನುದಾನದಡಿ ಸಂತಾನ ಶಕ್ತಿ ಹರಣ ಶಸ ಚಿಕಿತ್ಸೆ ಕೈಗೊಳ್ಳಲಾಗುತ್ತಿದೆ. ಆದರೆ, ಸಂತಾನ ಶಕ್ತಿ ಹರಣ ಶಸ ಚಿಕಿತ್ಸೆ ಕೈಗೊಂಡ ಮಾತ್ರಕ್ಕೆ ಅವುಗಳು ಸಾರ್ವಜನಿಕರಿಗೆ ಕಚ್ಚಬಾರದೆಂದೇನಿಲ್ಲವಲ್ಲ. ಹೀಗಾಗಿ ಮಕ್ಕಳಾದಿಯಾಗಿ ಸರ್ವರ ಮೇಲೂ ನಡೆಯುತ್ತಿರುವ ದಾಳಿಯನ್ನು ತಪ್ಪಿಸಲು ಆರೈಕೆ ಕೇಂದ್ರ ಸ್ಥಾಪಿಸಬೇಕೆಂಬ ತೀರ್ಮಾನ ಕೈಗೊಳ್ಳಲಾಗಿದೆ. ಶ್ರೀದಲ್ಲೇ ಯೋಜನೆ ಸಿದ್ಧಗೊಂಡು ವಿಜಯಪುರ ಜಿಲ್ಲೆ ರಾಜ್ಯದ ಎರಡನೇ ಶ್ವಾನ ಆರೈಕೆ ಕೇಂದ್ರ ಹೊಂದಿದ ಜಿಲ್ಲೆ ಎನ್ನಿಸಿಕೊಳ್ಳಲಿರುವುದು ಪ್ರಾಣಿಪ್ರಿಯರಲ್ಲಿ ಸಂತಸವನ್ನುಂಟು ಮಾಡಿದೆ.
* ಕೋಟ್&1
ನಾಯಿಗಳ ಸಂತತಿ ಹೆಚ್ಚಾಗುತ್ತಿದೆ. ವ್ಯ್ರಾಗೊಂಡ ನಾಯಿಗಳನ್ನು ನಿಯಂತ್ರಿಸುವುದು ಕಷ್ಟ. ಹೀಗಾಗಿ ನಾಯಿಗಳನ್ನು ಒಂದೆಡೆ ಆರೈಕೆ ಮಾಡಲೆಂದು ತೀರ್ಮಾನ ಕೈಗೊಂಡ ಫಲವಾಗಿ ಜಿಲ್ಲಾಡಳಿತ ಸಭೆ ನಡೆಸಿ ಯೋಜನೆಯೊಂದು ಸಿದ್ಧಪಡಿಸಿದೆ. ಶ್ರೀದಲ್ಲೇ ಗೋಶಾಲೆ ಮಾದರಿಯಲ್ಲಿ ಶ್ವಾನ ಆರೈಕೆ ಕೇಂದ್ರದ ಭೂಮಿ ಪೂಜೆ ನೆರವೇರಲಿದೆ.