ಹಿರೇಬಾಗೇವಾಡಿ: ಕೆರೆ ಸಮೃದ್ಧವಾಗಿದ್ದರೆ ಸುತ್ತಮುತ್ತಲಿನ ಹೊಲಗಳಿಗೆ ಅನುಕೂಲವಾಗುವುದರೊಂದಿಗೆ ಕೊಳವೆಬಾವಿಗಳ ಅಂತರ್ಜಲ ಹೆಚ್ಚುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಇಲ್ಲಿನ ಸಿದ್ಧನಬಾವಿ ಕೆರೆಗೆ ಬುಧವಾರ ಬಾಗಿನ ಅರ್ಪಿಸಿ ಮಾತನಾಡಿ, ಕೆರೆಗಳ ಪುನಶ್ಚೇತನದಿಂದ ರೈತರ ಬಾಳು ಹಸನಾಗಲಿದೆ. ಕೆರೆ ನೀರು ಸಂಗ್ರಹಿಸಲು ತಜ್ಞರ ಸಲಹೆ ಪಡೆದು ತಡೆಗೋಡೆ ನಿರ್ಮಿಸಲು ಯೋಚಿಸಲಾಗುತ್ತಿದೆ ಎಂದರು.
ಕುಂಭಮೇಳ ಮೆರವಣಿಗೆ ನಡೆಯಿತು. ಬಡೇಕೊಳ್ಳಮಠದ ನಾಗೇಂದ್ರ ಸ್ವಾಮೀಜಿ, ಮುತ್ನಾಳ ಹಿರೇಮಠದ ಶಿವಾನಂದ ಶಿವಾಚಾರ್ಯರು, ಕಾದ್ರಿ ದರ್ಗಾದ ಅಶ್ರಫ್‌ಪೀರ್ ಕಾದ್ರಿ, ಜಾಲಿ ಕರೆಮ್ಮ ದೇವಸ್ಥಾನದ ಉಳವಪ್ಪಜ್ಜ, ಡಾ.ಸಿದ್ಧೇಶ್ವರ ದೇವರು, ಈರಯ್ಯಸ್ವಾಮಿ ಉದೇಶಿಮಠ, ಕಲ್ಲಯ್ಯಸ್ವಾಮಿ ಉದೇಶಿಮಠ, ಗ್ರಾಪಂ ಅಧ್ಯಕ್ಷೆ ಜಯಶ್ರೀ ಜಪ್ತಿ, ಉಪಾಧ್ಯಕ್ಷೆ ಶ್ರುತಿ ಸಿದ್ದನ್ನವರ, ಸದಸ್ಯರಾದ ಸುರೇಶ ಇಟಗಿ, ಶ್ರೀಕಾಂತ ಮಾದುಭರಮಣ್ಣವರ, ಆನಂದಗೌಡ ಪಾಟೀಲ, ಸ್ವಾತಿ ಇಟಗಿ, ಸ್ಮಿತಾ ಪಾಟೀಲ, ಈರಪ್ಪ ಅರಳಿಕಟ್ಟಿ, ಗೌಸಮೋದ್ದಿನ್ ಜಾಲಿಕೊಪ್ಪ, ಸದ್ದಾಂ ನದಾಫ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಸಿ.ಪಾಟೀಲ, ಬಸನಗೌಡ ಪಾಟೀಲ, ಯಲ್ಲನಗೌಡ ಪಾಟೀಲ, ಅಡಿವೇಶ ಇಟಗಿ, ಚಂದ್ರಪ್ಪ ಶಿಂತ್ರಿ, ಪ್ರಕಾಶ ಜಪ್ತಿ, ಬಿ.ಎನ್.ಪಾಟೀಲ, ಉಳವಪ್ಪ ರೊಟ್ಟಿ ಇತರರಿದ್ದರು.