ಜಿಲ್ಲೆ

ಹುಲಿದೇವರವಾಡಕ್ಕೆ ಅಂಡರ್ ಪಾಸ್ ನಿರ್ವಿುಸಿ

ಉತ್ತರ ಕನ್ನಡ ಡೆಸ್ಕ್

ಅಂಕೋಲಾ: ಇಲ್ಲಿನ ಹುಲಿದೇವರವಾಡ ರಾ.ಹೆ. 66ರಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ನಡೆಸಲು ಬಂದ ಗುತ್ತಿಗೆದಾರರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ಕಾಮಗಾರಿ ನಡೆಸದಂತೆ ಬುಧವಾರ ಪ್ರತಿಭಟನೆ ನಡೆಸಿದರು.

ಪುರಸಭೆ ಸದಸ್ಯ ಅಶೋಕ ಶೆಡಗೇರಿ ಮಾತನಾಡಿ, ಮೊದಲು ಅಂಡರ್ ಪಾಸ್ ರಸ್ತೆ ನಿರ್ವಿುಸಿ, ನಂತರ ರಸ್ತೆ ಕಾಮಗಾರಿ ಕೈಗೊಳ್ಳಬೇಕು. ಕಳೆದ 7 ವರ್ಷಗಳಿಂದ ಸಂಬಂಧಪಟ್ಟ ಇಲಾಖೆ ಹಾಗೂ ವಿವಿಧ ಜನಪತ್ರಿನಿಧಿಗಳಿಗೆ ಅಂಡರ್​ಪಾಸ್ ನಿರ್ವಿುಸಿ, ಇಲ್ಲಿ ಆಗಿರುವ ರಸ್ತೆ ಅಪಘಾತಗಳನ್ನು ತಪ್ಪಿಸಬೇಕು ಎಂದು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಲ್ಲದೆ, ನಾಲ್ಕು ಸಲ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿ ಸರ್ಕಾರದ ಗಮನಕ್ಕೂ ತಂದಿದ್ದೇವೆ ಎಂದರು.

ಪ್ರಮುಖರಾದ ವೀಜು ಪಿಳ್ಳೆ ಮಾತನಾಡಿ, ನಾವು ಯಾವುದೇ ಕಾರಣಕ್ಕೂ ಚತುಷ್ಪ್ಪ ರಸ್ತೆ ಕಾಮಗಾರಿ ಮಾಡಲು ಬಿಡುವುದಿಲ್ಲ. ಈ ಭಾಗದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ ಎಂದರು.

ವಿನೋದ ನಾಯಕ, ರಾಮ ನಾಯಕ, ಸುಜಾತಾ ಗಾಂವಕರ, ರಾಜೇಶ ನಾಯ್ಕ, ವಿಶ್ವನಾಥ ನಾಯ್ಕ, ಸಬ್ಬೀರ ಶೇಖ್, ರಾಜೇಂದ್ರ ನಾಯ್ಕ ಮಾತನಾಡಿದರು.

ಎಸಿ ಕಲ್ಯಾಣ ಕಾಂಬಳೆ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಅಭಿಪ್ರಾಯ ಆಲಿಸಿದರು. ಶಾಸಕ ಸತೀಶ ಸೈಲ್ ಅವರು ಐಆರ್​ಬಿ ಕಂಪನಿಯ ಗುತ್ತಿಗೆದಾರರನ್ನು ದೂರವಾಣಿ ಮೂಲಕ ಸಂರ್ಪಸಿ ನಾಳೆ ಗುರುವಾರ ಸಂಜೆ ಸ್ಥಳೀಯರ ಮುಂದೆ ಸಭೆ ಸೇರಿ, ಅಲ್ಲಿ ನಿರ್ಣಯಿಸಿಕೊಳ್ಳುವ ಎನ್ನುವ ವಿಷಯ ತಿಳಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.