ಜಿಲ್ಲೆ

ಭಾರತದ ಸಂವಿಧಾನ ದೇಶದ ದಿಕ್ಸೂಚಿ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕೆ.ಪಿ.ಮಧುಸೂದನ್ ಹೇಳಿಕೆ

ಹುಳಿಯಾರು:ಭಾರತದ ಸಂವಿಧಾನವು ಕೇವಲ ಕಾನೂನುಗಳ ಸಂಗ್ರಹವಲ್ಲ, ಅದು ನಮ್ಮ ದೇಶದ ಆತ್ಮ ಮತ್ತು ದಿಕ್ಸೂಚಿ ಎಂದು ಹೆಬ್ಬೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕೆ.ಪಿ.ಮಧುಸೂದನ್ ತಿಳಿಸಿದರು.

ಹುಳಿಯಾರು ಕೆಂಕೆರೆಯ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಿಂದ ಆಯೋಜಿಸಲಾಗಿದ್ದ ‘ಭಾರತದ ಸಂವಿಧಾನದ ಮೂಲ ತತ್ವಗಳ ತಿಳಿವಳಿಕೆ’ ಕುರಿತು ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಾತನಾಡಿ, ಸಂವಿಧಾನದಲ್ಲಿರುವ ಸವಾನತೆ, ಸ್ವಾತಂತ್ರ್ಯ, ಸವಾಜವಾದ ಮತ್ತು ಜಾತ್ಯತೀಯತೆಯಂತಹ ಮೂಲ ತತ್ವಗಳನ್ನು ಅಳವಡಿಸಕೊಳ್ಳಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಸಿ.ವೀರಣ್ಣ ವಾತನಾಡಿ, ವಿದ್ಯಾರ್ಥಿಗಳು ಸಂವಿಧಾನದ ಆಶಯಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದರು.

ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಲಕ್ಷ್ಮೀ ವಾತನಾಡಿ, ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನದ ಅರಿವು ಅತ್ಯಗತ್ಯ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸುತ್ತವೆ ಎಂದರು.

ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುಮಯ್ಯ ವಾತನಾಡಿ, ಸಂವಿಧಾನವನ್ನು ಕೇವಲ ತಿಳಿದುಕೊಳ್ಳುವುದಷ್ಟೇ ಅಲ್ಲ, ಅದನ್ನು ನಮ್ಮ ಜೀವನದಲ್ಲಿ ಕಾರ್ಯರೂಪಕ್ಕೆ ತರುವುದು ಹೆಚ್ಚು ಮಹತ್ವದ್ದು ಎಂದರು.