ಶೃಂಗೇರಿಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಅಂಬೇಡ್ಕರ್ ಗೌರವಾರ್ಥ ರೂಪಿಸಿರುವ ಪಂಚತೀರ್ಥ ಯೋಜನೆಯ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು. ಬಿ.ಶಿವಶಂಕರ್, ಸುರೇಶ್, ಉಮೇಶ್, ಭರತ್ ಇದ್ದರು.  
ಜಿಲ್ಲೆ

ಭಾರತದ ಸಂವಿಧಾನ ವಿಶ್ವಕ್ಕೇ ಮಾದರಿ

ಶೃಂಗೇರಿ: ಪ್ರತಿಯೊಬ್ಬರಿಗೂ ಸಮಾನತೆಯನ್ನು ನೀಡಿರುವ ಡಾ. ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಭಾರತದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿ ಎಂದು ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾದ ವಕ್ತಾರ ಬಿ.ಶಿವಶಂಕರ್ ತಿಳಿಸಿದರು.

ಕನ್ನಡಭವನದಲ್ಲಿ ಮಂಡಲ ಬಿಜೆಪಿದಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ಡಾ. ಅಂಬೇಡ್ಕರ್ ಸ್ಮರಣಾರ್ಥ ಅವರ ಜನ್ಮಸ್ಥಳ ಸೇರಿದಂತೆ ಅವರ ಜೀವನಕ್ಕೆ ಸಂಬಂಧಪಟ್ಟ ಐದು ಸ್ಥಳಗಳನ್ನು ಗುರುತಿಸಿ ಪಂಚತೀರ್ಥ ಎಂಬ ಹೆಸರಿನಲ್ಲಿ ಯೋಜನೆ ರೂಪಿಸಿ ಅಭಿವೃದ್ಧಿ ಪಡಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಗೆ ಸಲ್ಲುತ್ತದೆ ಎಂದರು.
ಅಂಬೇಡ್ಕರ್ ಗೌರವಾರ್ಥ ಕೇಂದ್ರ ಸರ್ಕಾರ ರೂಪಿಸಿರುವ ಪಂಚತೀರ್ಥ ಹೆಸರಿನ ಯೋಜನೆಯ ಭಿತ್ತಿಪತ್ರವನ್ನು ಗಣ್ಯರು ಬಿಡುಗಡೆಗೊಳಿಸಿದರು. ಬಿಜೆಪಿ ಮಂಡಲದ ಅಧ್ಯಕ್ಷ ತಲಗಾರು ಉಮೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಭರತ್ ಗಿಣಕಲ್, ತಾಲೂಕು ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಸುರೇಶ್ ಯಡ್ಲುಕುಡಿಗೆ ಇದ್ದರು.