ಸಿಂಧನೂರಿಗೆ ಆಗಮಿಸಿದ ಸಂವಿಧಾನದ ಯುವಯಾನಕ್ಕೆ ಅದ್ದೂರಿ ಸ್ವಾಗತ ಕೋರಲಾಯಿತು. ಪ್ರಮುಖರಾದ ಎಚ್.ಎನ್. ಬಡಿಗೇರ್, ಮೌನೇಶ ಜಾಲವಾಡಗಿ, ಅಲ್ಲಮಪ್ರಭು ಪೂಜಾರಿ, ಬಸವರಾಜ ಬಾದರ್ಲಿ, ಚಿಟ್ಟಿ ಬಾಬು, ಬಿ.ಎನ್.ಯರದಿಹಾಳ ಇತರರಿದ್ದರು. 
ಜಿಲ್ಲೆ

ಸಂವಿಧಾನ ಆಶಯಗಳಿಗೆ ಧಕ್ಕೆ ತರದಿರಲಿ

ಸಿಂಧನೂರು: ಸಂವಿಧಾನ ಸಂರಕ್ಷಣಾ ಪಡೆ, ದೇಶಪ್ರೇಮಿ ಯುವಾಂದೋಲನ ಕಲಬುರಗಿ ಜಿಲ್ಲೆ ವಾಡಿಯಿಂದ ಕೈಗೊಂಡಿರುವ ಸಂವಿಧಾನ ಯುವಯಾನವು ಗುರುವಾರ ಸಂಜೆ ನಗರ ತಲುಪಿದ್ದು, ವಿವಿಧ ಸಂಘಟನೆಗಳಿಂದ ಅದ್ದೂರಿ ಸ್ವಾಗತ ಕೋರಲಾಯಿತು.

ಪಿಡಬ್ಲ್ಯುಡಿ ಕ್ಯಾಂಪ್‌ನಲ್ಲಿರುವ ಡಾ.ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು. ದಲಿತ ಮುಖಂಡ ಎಚ್.ಎನ್.ಬಡಿಗೇರ್ ಮಾತನಾಡಿ, ದೇಶದ ಸಂವಿಧಾನವು ಇಡೀ ವಿಶ್ವಕ್ಕೆ ಮಾದರಿ. ಆದರೆ, ಇಂದು ಕೋಮುವಾದಿ ಸರ್ಕಾರಗಳು ಜಾತಿಗಳು ಮತ್ತು ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ ಕೋಮು ಗಲಭೆ ಸೃಷ್ಟಿಸಿ ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದರು.

ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಮೌನೇಶ ಜಾಲವಾಡಗಿ, ಉಪನ್ಯಾಸಕ ನಾರಾಯಣ ಬೆಳಗುರ್ಕಿ ಮಾತನಾಡಿದರು. ಹಿರಿಯ ಮುಖಂಡರಾದ ಅಲ್ಲಮಪ್ರಭು ಪೂಜಾರಿ, ಬಸವರಾಜ ಬಾದರ್ಲಿ, ಚಿಟ್ಟಿ ಬಾಬು, ಬಿ.ಎನ್. ಯರದಿಹಾಳ, ಹನುಮಂತಪ್ಪ ಹಂಪನಾಳ, ರಮೇಶ್ ಪಾಟೀಲ್, ಮುತ್ತು ಸಾಗರ, ಆಲಂಬಾಷಾ ಬೂದಿಹಾಳ, ಯಮನೂರಪ್ಪ ಪರಾಪುರ, ಉಮೇಶ ಸುಕಾಲಪೇಟೆ, ಸುರೇಶ ಎಲೆಕೂಡ್ಲಿಗಿ, ಚಾಂದ್ ಪಾಷಾ, ರಾಜಶೇಖರ್, ವಿಠ್ಠಲರಾವ್ ಇದ್ದರು.