ಜಿಲ್ಲೆ

ಜೀವನಕ್ಕೆ ಸಂವಿಧಾನ ಅತ್ಯಂತ ಅಗತ್ಯ

ಬಸವರಾಜ ವೀರಪ್ಪ ಗರಗ

ಕಲಘಟಗಿ: ಸಂವಿಧಾನದ ತಳಹದಿಮೇಲೆ ಭಾರತೀಯರು ಬದುಕುತ್ತಿದ್ದಾರೆ. ನಿತ್ಯದ ಜೀವನಕ್ಕೆ ಅತ್ಯಂತ ಅಮೂಲ್ಯ ಮಾಹಿತಿ ಸಂವಿಧಾನದಲ್ಲಿ ಅಡಗಿದೆ. ಆದ್ದರಿಂದ ಎಲ್ಲರೂ ಸಂವಿಧಾನದ ತಿರುಳನ್ನು ತಿಳಿದುಕೊಳ್ಳಬೇಕು ಎಂದು ಉಪನ್ಯಾಸಕ ಈರಪ್ಪ ಮೇಟಿ ಹೇಳಿದರು.

ತಾಲೂಕಿನ ಗಂಜಿಗಟ್ಟಿಯಲ್ಲಿ ಹಮಿಕೊಂಡಿದ್ದ ಸಂವಿಧಾನ ಜಾಗೃತಿ ಮತ್ತು ಸ್ತಬ್ಧ ಚಿತ್ರಗಳ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂವಿಧಾನ ಭಾರತೀಯರಿಗೆ ಎಲ್ಲ ಮೂಲಭೂತ ಹಕ್ಕು, ಸ್ವಾತಂತ್ರ್ಯನ್ನು ನೀಡಿದೆ. ಇಲ್ಲಿ ಎಲ್ಲರೂ ಸಮಾನರು ಎಂಬುದನ್ನು ತಿಳಿಸಿದೆ. ಆದ್ದರಿಂದ ಪ್ರತಿಯೊಬ್ಬರೂ ಸಂವಿಧಾನದ ಮಾಹಿತಿ ಹೊಂದಬೇಕು ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎ.ಜೆ. ಯೋಗಪ್ಪನವರ, ಕುಮಾರ ಕೆ. ಎಫ್., ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮಹಿಳೆಯರು, ಮಕ್ಕಳು, ಪಾಲ್ಗೊಂಡಿದ್ದರು. ನಂತರ ಬೀರವಳ್ಳಿ, ಗುಡ್ಡದಹುಲಿಕಟ್ಟಿ, ತಬಕದಹೊನ್ನಿಹಳ್ಳಿ, ಜಿನ್ನೂರ, ಗ್ರಾಮಗಳಲ್ಲಿ ಜಾಥಾ ಸಂಚರಿಸಿತು.