ಜಿಲ್ಲೆ

ಮನುಕುಲಕ್ಕೆ ಸಂವಿಧಾನ ರಹದಾರಿ

ಹಿರಿಯೂರು: ಸಂವಿಧಾನ ಮನುಕುಲಕ್ಕೆ ರಹದಾರಿ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ತಾಲೂಕಿನ ಅಡವಿ ರಾಮಜೋಗಿಹಳ್ಳಿ ಗ್ರಾಮದಲ್ಲಿ ದಲಿತರ ಮೇಲಿನ ಹಲ್ಲೆ ಖಂಡಿಸಿ ತಾಲೂಕು ಕಚೇರಿ ಬಳಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಧರಣಿ ನಿರತ ಸ್ಥಳಕ್ಕೆ ಶನಿವಾರ ಭೇಟಿ ನೀಡಿ, ಮನವಿ ಸ್ವೀಕರಿಸಿ ಮಾತನಾಡಿದರು.

ಮಾನವತವಾದಿ ಅಂಬೇಡ್ಕರ್ ಅವರ ಆದರ್ಶಗಳು ಸಾರ್ವಾಕಾಲಿಕ ಶ್ರೇಷ್ಠವಾಗಿದ್ದು, ಗ್ರಾಮೀಣ ಭಾಗದಲ್ಲಿ ಜಾತಿ ಸಂಘರ್ಷಕ್ಕೆ ಅವಕಾಶ ನೀಡದೆ ಎಲ್ಲರು ಪ್ರೀತಿ, ವಿಶ್ವಾಸ, ಮಾನವೀಯ ಮೌಲ್ಯಗಳನ್ನು ಗೌರವಿಸಿ ಬದುಕು ಕಟ್ಟಿಕೊಳ್ಳಬೇಕು ಎಂದರು.

ಅಂಬೇಡ್ಕರ್ ನಾಮಫಲಕ ಅಳವಡಿಕೆ ವಿಚಾರಕ್ಕೆ, ದಲಿತರ ಮೇಲಿನ ಹಲ್ಲೆ ಖಂಡನೀಯ. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ, ಹಲ್ಲೆಗೊಳಗಾದ ದಲಿತರಿಗೆ ಸೂಕ್ತ ಪರಿಹಾರ, ನೆರವಿನ ಹಸ್ತ ಚಾಚಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಸಚಿವರ ಭರವಸೆಗೆ ಸಮ್ಮತಿಸಿದ ದಲಿತ ಮುಖಂಡರು ಧರಣಿ ಹಿಂಪಡೆದರು. ಮುಖಂಡರಾದ ಜೀವೇಶ್, ತಿಮ್ಮರಾಜ್, ಕೆ.ಪಿ.ಶ್ರೀನಿವಾಸ್, ರಾಘು, ಮಹೇಶ್, ಘಾಟ್ ರವಿ, ಜಿ.ಎಲ್.ಮೂರ್ತಿ, ಕರ್ಣ, ಹನುಮಂತ, ಪ್ರದೀಪ್, ಹರೀಶ್, ಜ್ಞಾನೇಶ್, ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ಇತರರಿದ್ದರು.