ಎಡ ಪ್ರಜಾಸತ್ತಾತ್ಮಕ ಸಂಘಟನೆಗಳ ವೇದಿಕೆಯಿಂದ ರಾಯಚೂರಿನಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಕಾರ್ಯದರ್ಶಿ ಕೆಜಿ ವೀರೇಶ ವಿವಿಧ ಸಂಘಟನೆಗಳ ಪ್ರಮುಖರಾದ ಎಚ್.ಪದ್ಮಾ, ಕರಿಯಪ್ಪ ಅಚ್ಚೊಳ್ಳಿ, ಡಿ.ಎಸ್.ಶರಣ ಬಸವ, ಶರಣಗೌಡ ಎಂ, ಅಕ್ಕಮಹಾದೇವಿ, ಹನುಮಂತ, ಮಲ್ಲಿಕಾರ್ಜುನ, ಜಂಬಣ್ಣ, ತಾಯಮ್ಮ, ವರಲಕ್ಷ್ಮೀ, ಶಿವಪ್ಪ, ನಲ್ಲಾರೆಡ್ಡಿ, ಹುಲಿಗೇಪ್ಪ, ಪುಚ್ಚಲದಿನ್ನಿ, ನರಸಿಂಹ ಇದ್ದರು. 
ಜಿಲ್ಲೆ

ಸಂವಿಧಾನಕ್ಕೆ ಅವಮಾನ ಮಾಡಿದ ಷಾ

Kopala - Desk - Eraveni

ರಾಯಚೂರು: ಡಾ.ಬಿ.ಆರ್.ಅಂಬೇಡ್ಕರ ಅವರಿಗೆ ಅವಹೇಳನ ಮಾಡಿರುವ ಕೇಂದ್ರ ಸಚಿವ ಅಮಿತ್ ಷಾ ಹಾಗೂ ಮಹಿಳಾ ಸಚಿವೆ ಬಗ್ಗೆ ಅಗೌರವವಾಗಿ ಮಾತಾನಾಡಿದ ಎಂಎಲ್ಸಿ ಸಿಟಿ ರವಿ ನಡೆಯನ್ನು ವಿರೋಧಿಸಿ ಎಡ ಪ್ರಜಾಸತ್ತಾತ್ಮಕ ಸಂಘಟನೆಗಳ ವೇದಿಕೆಯಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವೀರೇಶ ಮಾತನಾಡಿ, ಸಂವಿಧಾನದ 75ನೇ ವರ್ಷಾಚರಣೆ ಚರ್ಚೆಯಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಗ್ಗೆ ಕೇಂದ್ರದ ಗೃಹ ಸಚಿವ ಅಮಿತ್ ಷಾ ಅವಹೇಳನಕಾರಿ ಹೇಳಿಕೆ ಖಂಡನೀಯ.

ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಿದ ಸಂವಿಧಾನದಲ್ಲಿ ದೇಶದ ಎಲ್ಲ ಜನರಿಗೆ ಸಮಾನ ಅವಕಾಶ ಅಧಿಕಾರ ಘನತೆ ಬದುಕಿನ ಆಶ್ವಾಸನೆಗಳಿವೆ. ಸಂಸತ್ತಿನಲ್ಲಿ ಅಂಬೇಡ್ಕರ್ ಅವರನ್ನು ಅವಮಾನಿಸುವ ಮೂಲಕ ಸಂವಿಧಾನ ಮತ್ತು ದೇಶದ ಅಸಂಖ್ಯಾತ ದುಡಿಯುವ ಜನರಿಗೆ ಅವಮಾನ ಮಾಡಿದ್ದಾರೆ.

ವಿಧಾನಪರಿಷತ್ತಿನಲ್ಲಿ ಬಿಜೆಪಿ ಶಾಸಕ ಸಿ.ಟಿ.ರವಿ ರಾಜ್ಯದ ಮಹಿಳಾ ಸಚಿವರನ್ನುದ್ದೇಶಿಸಿ ಆಡಿದ ಆಕ್ಷೇಪಾರ್ಹ ಮಾತುಗಳು ಎಡಪ್ರಜಾಸತ್ತಾತ್ಮಕ ಸಂಘಟನೆಗಳು ಖಂಡಿಸಿವೆ. ಅವರನ್ನು ಎಂಎಲ್‌ಸಿ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಒತ್ತಾಯಿಸಿದರು.

ವಿವಿಧ ಸಂಘಟನೆಗಳ ಪ್ರಮುಖರಾದ ಎಚ್.ಪದ್ಮಾ, ಕರಿಯಪ್ಪ ಅಚ್ಚೊಳ್ಳಿ, ಡಿ.ಎಸ್.ಶರಣ ಬಸವ, ಶರಣಗೌಡ ಎಂ, ಅಕ್ಕಮಹಾದೇವಿ, ಹನುಮಂತ, ಮಲ್ಲಿಕಾರ್ಜುನ, ಜಂಬಣ್ಣ, ತಾಯಮ್ಮ, ವರಲಕ್ಷ್ಮೀ, ಶಿವಪ್ಪ, ನಲ್ಲಾರೆಡ್ಡಿ, ಹುಲಿಗೇಪ್ಪ, ಪುಚ್ಚಲದಿನ್ನಿ, ನರಸಿಂಹ ಇದ್ದರು.