ಧಾರವಾಡ: ಭಾರತ ಸಂವಿಧಾನ ಜಾರಿಗೆ ಬಂದು ೭೫ ವರ್ಷ ಸಂದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಂವಿಧಾನದ ಜಾಗೃತಿ ಜಾಥಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜ. ೨೬ರಂದು ಜಾಥಾಕ್ಕೆ ಚಾಲನೆ ನೀಡಲಾಗಿತ್ತು. ಇದು ಜಿಲ್ಲೆಯ ೧೪೬ ಗ್ರಾಮ ಪಂಚಾಯಿತಿಗಳು, ೭ ಸ್ಥಳೀಯ ನಗರ ಸಂಸ್ಥೆಗಳು ಮತ್ತು ಮಹಾನಗರ ಪಾಲಿಕೆಯ ವ್ಯಾಪ್ತಿಯ ಎಲ್ಲ ವಾರ್ಡ್ ಸೇರಿ ೧,೫೨೮ ಕಿ.ಮೀ. ಸಂಚರಿಸಿದೆ.
ಸAವಿಧಾನ ಜಾಜ್ಕತಿ ಜಾಥಾದ ಅರಿವು ಮೂಡಿಸುವ ಚಟುವಟಿಕೆಗಳಲ್ಲಿ ಜಿಲ್ಲೆಯು ಬೆಳಗಾವಿ ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಜಾಥಾ ಭಾಗವಾಗಿದ್ದ ಪಾರಂಪರಿಕ ನಡಿಗೆ ಮತ್ತು ಪಂಜಿನ ಮೆರವಣಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆಯಾಗಿದೆ. ಪಾರಂಪರಿಕ ನಡಿಗೆಯಲ್ಲಿ ಶಾಲೆ- ಕಾಲೇಜುಗಳ ವಿದ್ಯಾರ್ಥಿಗಳು, ಸಂಘ- ಸಂಸ್ಥೆಗಳ ನಾಯಕರು, ಪದಾಽಕಾರಿಗಳು, ಸಾರ್ವಜನಿಕರು, ಅಽಕಾರಿಗಳು ಸೇರಿ ೧೦,೦೦೦ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.