ಸುನೀಲ್ ಬೋಸ್ ಯುವ ಬ್ರಿಗೇಡ್‌ನ ಅಧ್ಯಕ್ಷ ಕುಮಾರ್ ರಾಮೇಗೌಡ  
ಜಿಲ್ಲೆ

26ರಂದು ಸಂವಿಧಾನ ಅಮೃತ ಮಹೋತ್ಸವ

ಅಭಿನಯ್ ಎಚ್.ಎಂ

ತಿ.ನರಸೀಪುರ: ಭಾರತದಲ್ಲಿ ಸಂವಿಧಾನ ಜಾರಿಯಾಗಿ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಗುರು ಬುದ್ಧ ಪ್ರೊಡಕ್ಷನ್ ಪ್ರಸ್ತುತಿಯಿಂದ ಬೆಂಗಳೂರಿನ ವಿಧಾನಸೌಧದ ಶಾಸಕರ ಭವನದಲ್ಲಿ ನ.26 ರಂದು ಬೆಳಗ್ಗೆ 10 ಗಂಟೆಗೆ ಸಂವಿಧಾನ ಅಮೃತ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಅಹಿಂದ ಬ್ರಿಗೇಡ್ ಹಾಗೂ ಸುನೀಲ್ ಬೋಸ್ ಯುವ ಬ್ರಿಗೇಡ್‌ನ ಅಧ್ಯಕ್ಷ ಕುಮಾರ್ ರಾಮೇಗೌಡ ತಿಳಿಸಿದ್ದಾರೆ.

ಅಂದು 20 ರಿಂದ 30 ಖ್ಯಾತ ಚಿತ್ರ ಕಲಾವಿದರು 30 ಅಡಿ ಎತ್ತರ, 40 ಅಡಿ ಅಗಲದ ಬೃಹತ್ ಪರದೆ ಮೇಲೆ ಲೈವ್ ಪೇಂಟಿಂಗ್ ನಲ್ಲಿ ಅಂಬೇಡ್ಕರ್ ಅವರ ಕಲಾಕೃತಿಯನ್ನು ರಚಿಸಲಿದ್ದಾರೆ. ಇದರೊಂದಿಗೆ ನ.23, 24ರಂದು ಸಂಜೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.