ಹುಬ್ಬಳ್ಳಿ: ಆಸ್ತಿ ಲಪಟಾಯಿಸಿದ ಆರೋಪದ ವರದಿ ಆಧರಿಸಿ ಇಲ್ಲಿನ ಕಸಬಾಪೇಟೆ ಠಾಣೆ ಪೊಲೀಸ್ ಪೇದೆ ಬಸು ಮಣ್ಣೂರ ಅವರನ್ನು ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರು ಇಲಾಖಾ ವಿಚಾರಣೆ ಬಾಕಿ ಇಟ್ಟು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಪೊಲೀಸ್ ವಾಹನದ ಮುಂದೆ ಅಸಭ್ಯ ಮಾತುಗಳಿರುವ ರೀಲ್ಸ್ ಮಾಡಿದ್ದರ ಆರೋಪವೂ ಕೂಡ ಅವರ ಮೇಲಿದೆ.