ಕನಕಗಿರಿ ತಾಲೂಕು ಅತಿಥಿ ಶಿಕ್ಷಕರ ಸಂಘದಿಂದ ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಬುಧವಾರ ಮನವಿ ಸಲ್ಲಿಸಲಾಯಿತು. ಸಂಘದ ತಾಲೂಕು ಅಧ್ಯಕ್ಷ ಆದಪ್ಪ ನಾಯಕ, ವೀರನಗೌಡ, ಪರಶುರಾಮ, ಹನಮಂತ ಇತರರಿದ್ದರು. 
ಜಿಲ್ಲೆ

ಶಿಕ್ಷಕರ ನೇಮಕಾತಿಯಲ್ಲಿ ಸೇವಾ ಹಿರಿತನ ಪರಿಗಣಿಸಿ

ಕನಕಗಿರಿ: ಅತಿಥಿ ಶಿಕ್ಷಕರಿಗೆ ಸಮಾನ ವೇತನ ಮತ್ತು ರಜೆ ಒದಗಿಸುವುದರ ಜತೆಗೆ ಶೇ.5 ಕೃಪಾಂಕ ನೀಡಬೇಕೆಂದು ಒತ್ತಾಯಿಸಿ ತಾಲೂಕು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಅತಿಥಿ ಶಿಕ್ಷಕರ ಸಂಘದಿಂದ ಬುಧವಾರ ಶಾಲೆ ತೊರೆಯೋಣ ಅಭಿಯಾನದ ಮೂಲಕ ಗೈರಾಗಿ ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಮನವಿ ಸಲ್ಲಿಸಿದರು.


ಸಂಘದ ತಾಲೂಕು ಅಧ್ಯಕ್ಷ ಆದಪ್ಪ ನಾಯಕ ಮಾತನಾಡಿ, ಶಿಕ್ಷಕರ ನೇಮಕಾತಿಯಲ್ಲಿ ಸೇವಾ ಹಿರಿತನ ಪರಿಗಣಿಸಬೇಕು. ಸೇವೆಯ ಆಧಾರದ ಮೇಲೆ ಶಾಲೆಗಳಲ್ಲಿ ಸೇವಾ ದೃಢೀಕರಣ ನೀಡಬೇಕು. ಪ್ರತಿ ತಿಂಗಳ ವೇತನ ನೇರವಾಗಿ ಶಿಕ್ಷಕರ ಖಾತೆಗೆ ಜಮಾ ಮಾಡಬೇಕು.

ಅತಿಥಿ ಶಿಕ್ಷಕರು ಎನ್ನುವ ಬದಲಾಗಿ ಗೌರವ ಶಿಕ್ಷಕರು ಎಂದು ಘೋಷಿಸಬೇಕು. ಕಾಯಂ ಶಿಕ್ಷಕರಂತೆ ನಮಗೂ ಸಮಾನ ಸ್ಥಾನಮಾನ, ವಿವಿಧ ತರಬೇತಿಗಳಿಗೆ ಅವಕಾಶ ನೀಡಬೇಕು. ದೆಹಲಿ, ಹರಿಯಾಣ, ಉತ್ತರ ಪ್ರದೇಶದಲ್ಲಿನ ಸರ್ಕಾರಗಳು ಕೈಗೊಂಡ ನಿರ್ಣಯಗಳನ್ನು ರಾಜ್ಯ ಸರ್ಕಾರವು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅತಿಥಿ ಶಿಕ್ಷಕರಾದ ರೂಪಾ, ಸುಜಾತಾ, ರೇಣುಕಾ, ವೀರನಗೌಡ, ಪರಶುರಾಮ, ಹನಮಂತ, ಯಮನೂರಪ್ಪ ಇತರರಿದ್ದರು.