ಜಿಲ್ಲೆ

ಜೆಡಿಎಸ್ ಸೇರಿದ ಕಾಂಗ್ರೆಸ್ ಕಾರ್ಯಕರ್ತರು

Dharwada - Basavaraj Idli

ಹುಬ್ಬಳ್ಳಿ: ನಗರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಜನತಾದಳ ಜಾತ್ಯತಿತ (ಜೆಡಿಎಸ್) ಮಹಾನಗರ ಜಿಲ್ಲಾ ಪ್ರಮುಖರ ಸಭೆಯಲ್ಲಿ ಕಾಂಗ್ರೆಸ್‌ನ ಅನೇಕ ಕಾರ್ಯಕರ್ತರು ಪಕ್ಷ ಸೇರಿದರು.

ವಾರ್ಡ್ ನಂ. 6ರ ಕಾಂಗ್ರೆಸ್ ಯುವ ಮುಖಂಡ ಆಶ್ರಫ ಹೋಳಿ ಹಾಗೂ ಅವರ ಸಂಗಡಿಗರಾದ ಅಯಾನ ಪಟೇಲ, ಅಸ್ಲಂ ಕಳ್ಳಿಮನಿ, ಅಫರಾನ ಬಾಗವಾನ, ಇರ್ಫಾನ ಶಿವಳ್ಳಿ, ಸಮೀರ ಪಠಾಣ, ಅಲ್ತಾಫ ಮಡಿಕೇಶ್ವರ, ಸಾಬೀರ, ನಿಜಾಮ ಅವರು ಜೆಡಿಎಸ್ ಸೇರ್ಪಡೆಯಾದರು.

ಅಧ್ಯಕ್ಷತೆ ವಹಿಸಿದ್ದ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಅವರು ಪಕ್ಷದ ಶಾಲು ಹೊದಿಸಿ ಅವರನ್ನು ಸ್ವಾಗತಿಸಿದರು.

ಪಕ್ಷದ ಸದಸ್ಯತ್ವ ಅಭಿಯಾನ ಹಾಗೂ ಸಂಘಟನೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಬಿ. ಗಂಗಾಧರಮಠ ಉಪಸ್ಥಿತರಿದ್ದರು.

ಮಹಾನಗರ ಪಾಲಿಕೆ ಸದಸ್ಯೆ ಲಕ್ಷೀ ಹಿಂಡಸಗೇರಿ, ಮುಖಂಡರಾದ ನವೀನಕುಮಾರ, ವಿನಾಯಕ ಗಾಡಿವಡ್ಡರ, ಬಾಷಾಸಾಬ್ ಮುದಗಲ, ಬಸವರಾಜ ಕುರಟ್ಟಿಮಠ, ಮಾರುತಿ ಹಿಂಡಸಗೇರಿ, ಅಹ್ಮದ್ ಅರಸೀಕೆರೆ, ಇನಾಯತ್ ಹೆಬ್ಬಳ್ಳಿ, ಶ್ರೀಕಾಂತ ತೇಲಗರ, ಮಕ್ತುಮಹುಸೇನ ಮಸ್ತಾನವಾಲೆ, ರ್ಪೂಣಿಮಾ ಸವದತ್ತಿ, ಪೂಜಾ ಮೆಣಸಿನಕಾಯಿ, ಭೀಮರಾಯ ಗುಡೇನಕಟ್ಟಿ, ಶಂಕರ ಪವಾರ್, ಸಿದ್ದು ಮಹಾಂತಒಡೆಯರ, ಪುನಿತ್ ಅಡಗಲ್ಲ, ಶಾಬಾಜ ಮುದಗಲ್, ಆರ್. ಲಕ್ಷ್ಮಣ, ಸಲಿಂ ಜಾಗಿರದಾರ, ಕಾರ್ಯಕರ್ತರು ಉಪಸ್ಥಿತರಿದ್ದರು.