ಜಿಲ್ಲೆ

ಸರಗೂರು ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮ

ಮಾದೇಶ್ ತಿ.ನರಸೀಪುರ

ಚಾಮರಾಜನಗರ ಮೀಸಲು ಕ್ಷೇತ್ರದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ಜಯಗಳಿಸಿದ ಹಿನ್ನೆಲೆ ಮಂಗಳವಾರ ಸರಗೂರು ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪಕ್ಷದ ನಗರ ಅಧ್ಯಕ್ಷ ನಾಗರಾಜು, ಪ.ಪಂ. ಸದಸ್ಯ ಶ್ರೀನಿವಾಸ, ಚಲುವಕೃಷ್ಣ, ಮಹೇಶ್, ಪ.ಪಂ. ಮಾಜಿ ಸದಸ್ಯ ರಂಗನಾಥ್, ಬಿಲ್ಲಯ್ಯ, ಯೋಗೇಶ್, ಬಸವರಾಜು, ಕೃಷ್ಣ, ನಾಗರಾಜರಾಮ, ರಮೇಶ್ ಇತರರು ಇದ್ದರು.