ಜಿಲ್ಲೆ

ಉಪಚುನಾವಣೆ ಗೆಲುವಿಗೆ ಕಾಂಗ್ರೆಸ್ ವಿಜಯೋತ್ಸವ

ಮುಂಡರಗಿ: ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭೆ ಉಪಚುನಾವಣೆಯಲ್ಲಿ ಈ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ (ಬೃಂದಾವನ ಸರ್ಕಲ್) ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಬ್ಲಾಕ್ ಕಾಂಗ್ರೆಸ್ ಕಮಿಟಿ ತಾಲೂಕಾಧ್ಯಕ್ಷ ಡಿ.ಡಿ. ಮೋರನಾಳ ಮಾತನಾಡಿ, ವಿರೋಧ ಪಕ್ಷದವರು ಮುಡಾ, ವಕ್ಪ್ ವಿಚಾರವಾಗಿ ಹಗರಣ ಎಂದು ಹೇಳಿಕೊಂಡು ಜನರ ಮನಸಿನಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡಿದರು. ಆದರೆ, ಜನರು ಯಾವುದೆ ಗೊಂದಲಕ್ಕೆ ಕಿವಿಗೊಡದೇ ಈ ಉಪ ಚುನಾವಣೆಯ ಫಲಿತಾಂಶದ ಮೂಲಕ ವಿರೋಧ ಪಕ್ಷದವರಿಗೆ ತಕ್ಕ ಉತ್ತರ ನೀಡಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಜನರಿಗೆ ಖುಷಿಯನ್ನು ನೀಡಿದೆ. ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ಈ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಾತೀತ ನಾಯಕರು. ಸರ್ಕಾರಕ್ಕೆ ಅಭಿವೃದ್ಧಿ ಕೆಲಸಗಳನ್ನು ಮಾಡುವುದಕ್ಕೆ ವಿರೋಧ ಪಕ್ಷದವರು ಅನುಕೂಲ ಮಾಡಿಕೊಡಬೇಕು ಎಂದರು.

ಡಿ.ಎಂ. ಕಾತರಕಿ, ಶೇಖರ ಜುಟ್ಲಣ್ಣವರ, ಯಲ್ಲಪ್ಪ ಹೊಂಬಳಗಟ್ಟಿ, ಜ್ಯೋತಿ ಕುರಿಯವರ, ಮಂಜುನಾಥ ಗೌಡರ, ರಾಘವೇಂದ್ರ ನರೇಗಲ್ಲ, ಧ್ರುವಕುಮಾರ ಹೊಸಮನಿ, ಮುದುಕಪ್ಪ ಕುಂಬಾರ, ಅಡಿವೆಪ್ಪ ಚಲವಾದಿ, ಸುರೇಶ ಉಪ್ಪಾರ, ದಶರಥ ಡೊಣ್ಣಿ, ವಿನೋದ ವಡ್ಡರ, ಎ.ಪಿ. ದಂಡಿನ, ಅಂದಪ್ಪ ಬಳ್ಳಾರಿ, ಅಂದಪ್ಪ ಹಂದ್ರಾಳ, ಲಕ್ಷ್ಮಣ ತಗಡಿನಮನಿ, ಲಕ್ಷ್ಮೀದೇವಿ ಮಾಗಡಿ, ಸುಲೇಮಾನ್ ಬೇವೂರ, ಮಂಜುನಾಥ ಕಟ್ಟಿಮನಿ, ಇತರರಿದ್ದರು.