ಇಳಕಲ್ಲ(ಗ್ರಾ): ಇಲ್ಲಿನ ನಗರಸಭೆಯ 19ನೇ ವಾರ್ಡಿನ ಉಪಚುನಾವಣೆ ಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷ ಜಯಸಾಧಿಸಿದೆ.
ಮಂಗಳವಾರ ನಡೆದ ಚುನಾವಣೆ ಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷದ ರತ್ನಾ ಅಮರೇಶ ತಳವಾರ 520 ಮತಗಳನ್ನು ಪಡೆದು 167 ಮತಗಳ ಅಂತರದಿಂದ ಗೆದ್ದಿದ್ದಾರೆ.
ಬಿಜೆಪಿಯ ನಾಗೇಶ ಮೇದಾರ 367 ಮತಗಳನ್ನು ಪಡೆದರೆ, ಹತ್ತು ಮತಗಳು ನೋಟಾ ಪರ ಬಂದಿವೆ ಎಂದು ಚುನಾವಣಾಧಿಕಾರಿ ಸಂಗಪ್ಪ ಬೇನಾಳ ಹೇಳಿದರು.
ವಿಜಯಶಾಲಿಯಾದ ಅಭ್ಯರ್ಥಿ ರತ್ನಾ ತಳವಾರ ಅವರಿಗೆ ಚುನಾವಣಾಧಿಕಾರಿ ಮತ್ತು ತಹಸೀಲ್ದಾರ್ ಸತೀಶ ಕೂಡಲಗಿ ಚುನಾವಣೆ ಪ್ರಮಾಣ ಪತ್ರ ವಿತರಿಸಿದರು.
ಬಳಿಕ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಸದಸ್ಯರಾದ ಅಮೃತ ಬಿಜ್ಜಳ, ಸುರೇಶ ಜಂಗ್ಲಿ, ಕಾಂಗ್ರೆಸ್ ಮುಖಂಡರಾದ ಶ್ರೀನಿವಾಸ ಗುರಂ, ವಿಠ್ಠಲ ಜಕ್ಕಾ ರಿಯಾಜ್ ಮಕಾನದಾರ, ಅಬ್ದುಲ್ ಗದ್ವಾಲ ನಾಮ ನಿರ್ದೇಶಿತ ಸದಸ್ಯರಾದ ಅಬ್ಬು ಹಳ್ಳಿ, ಯಲ್ಲಪ್ಪ ರಾಜಾಪೂರ ಇತರರಿದ್ದರು.