ಸಚಿವ ಸಂತೋಷ್ ಲಾಡ್ ಮಾತನಾಡಿದರು. ಕೆಪಿಸಿಸಿ ವಕ್ತಾರ ಅನಿಲ್ ತಡಕಲ್ ಸುದ್ದಿಗೋಷ್ಠಿಯಲ್ಲಿದ್ದರು.  
ಜಿಲ್ಲೆ

ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ಇಲ್ಲ

ಪ್ರವೀಣ ಉದುಸಾ ದಲಬಂಜನ್

ಸಂಡೂರು: ಸಂಡೂರು ಕಾಂಗ್ರೆಸ್ ಭದ್ರ ಕೋಟೆ. ಇಲ್ಲಿ ಯಾರೇ ಬಂದರೂ ಕಾಂಗ್ರೆಸ್ ಗೆಲ್ಲುತ್ತೆ. ಗ್ಯಾರಂಟಿ ಯೋಜನೆಗಳು, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆಶಿ ಅವರ ಕೆಲಸಗಳು ನಮಗೆ ಗೆಲ್ಲುವಂತೆ ಮಾಡುತ್ತವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿ, ಜನಾರ್ದನ ರೆಡ್ಡಿಗೆ ಮನೆಯಿಲ್ಲ. ಹೀಗಾಗಿ ಇಲ್ಲಿ ಮನೆ ಮಾಡ್ತಾರೆ. ನಮಗೆ ಮೊದಲಿಂದಲೂ ಇಲ್ಲೇ ಮನೆಯಿದೆ. ಚುನಾವಣೆಯಲ್ಲಿ ಲಾಡ್-ವರ್ಸಸ್ ರೆಡ್ಡಿ ಎನ್ನುವುದೇನೂ ಇಲ್ಲ. ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ಇಲ್ಲ ಎಂದರು.

ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, ಸಂಸದ ಈ.ತುಕಾರಾಮ್ ಮಾಡಿದ ಕೆಲಸಗಳ ಜತೆಗೆ ಸಿದ್ದರಾಮಯ್ಯ ಸಂಡೂರಿಗೆ ಕೊಟ್ಟ ಕೊಡುಗೆಗಳಿಂದ ಕಾಂಗ್ರೆಸ್ ಗೆಲ್ಲಲಿದೆ ಎಂದರು. ಮಾಜಿ ಸಚಿವ ಬಿ.ನಾಗೇಂದ್ರ ಮಾತನಾಡಿ, ಸಂಡೂರು ನಮಗೆ ಹೊಸದೇನಲ್ಲ. ಯಾವಾಗಲೂ ಬರುತ್ತೇನೆ.. ಹೋಗ್ತೇನೆ ಎಂದರು.