ಸೊರಬದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಬಿಜೆಪಿ ಬೆಂಬಲಿತ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಬಿ.ವೈ.ರಾಘವೇಂದ್ರ, ಟಿ.ಡಿ.ಮೇಘರಾಜ್, ಪ್ರಕಾಶ್ ತಲಕಾಲಕೊಪ್ಪ, ಶ್ರೀನಾಥ, ಗಿರೀಶ್ ಪಟೇಲ್, ಶಿವಕುಮಾರ್ ಇತರರಿದ್ದರು.  
ಜಿಲ್ಲೆ

ರಾಜ್ಯದಲ್ಲಿ ಶೀಘ್ರವೇ ಅಂತ್ಯವಾಗಲಿದೆ ಕಾಂಗ್ರೆಸ್ ಆಡಳಿತ: ಬಿ.ವೈ.ಆರ್

Shivamogga - Desk - Megha MS

ಸೊರಬ: ಮುಂಬರುವ ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಽಕಾರದಲ್ಲಿ ಇರುವುದಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ತಾಲೂಕು ಬಿಜೆಪಿಯಿಂದ ಆಯೋಜಿಸಿದ್ದ ಪಕ್ಷ ಬೆಂಬಲಿತ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಪಂ ವ್ಯಾಪ್ತಿಯಲ್ಲಿ ಸವಾಲುಗಳ ನಡುವೆ ನೀವು ಅಽಕಾರ ಪಡೆದಿರುವುದು ಹೆಮ್ಮೆಯ ಸಂಗತಿ. ವಿರೋಧ ಪಕ್ಷದ ಆಸೆ, ಆಕಾಂಕ್ಷೆಗಳಿಗೆ ಆಸೆ ಪಡದೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಆತ್ಮವಿಶ್ವಾಸ ಹೆಚ್ಚಿಸಿದೆ ಎಂದರು.
ರಾಜ್ಯದಲ್ಲಿ ಮಳೆ ಇಲ್ಲದೆ ಬರ ಆವರಿಸಿದೆ. ಆದರೆ ಆಡಳಿತ ಪಕ್ಷದವರು ಆಪರೇಷನ್ ಕಾಂಗ್ರೆಸ್ ಮಾಡುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಽಕಾರದಲ್ಲಿ ಇರುವುದಿಲ್ಲ. ಯಾವುದೇ ಸಂದರ್ಭದಲ್ಲೂ ನಮ್ಮ ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ನಾಡಿನ ದೊರೆ ಎನಿಸಿಕೊಂಡವರು ಭೀಕರ ಬರಗಾಲದಲ್ಲೂ ರಾಜ್ಯದ ಜನತೆಯ ಸುಭೀಕ್ಷೆಗಾಗಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಸೌಜನ್ಯವೂ ಇಲ್ಲ. ಇವರ ದುರಹಂಕಾರದ ನಡೆಯಿಂದ ಬಡ ರೈತರು, ಜನತೆ ಕಷ್ಟ ಎದುರಿಸುವಂತಾಗಿದೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ತಪ್ಪು ಎನ್ನುವಂತೆ ಬಿಂಬಿಸುವ ಪ್ರಯತ್ನ ಆಡಳಿತ ಪಕ್ಷದಿಂದ ನಡೆಯುತ್ತಿದೆ. ಇದಕ್ಕೆ ಕಾರ್ಯಕರ್ತರು ಕಿವಿಗೊಡದೆ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕಾರ್ಯಕ್ರಮಗಳನ್ನು ಜನತೆಗೆ ಮನವರಿಕೆ ಮಾಡಿಕೊಡಬೇಕು ಎಂದರು
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಸೊರಬ ತಾಲೂಕು ಘಟಕದ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಾಥ, ವಿಭಾಗೀಯ ಪ್ರಮುಖ ಗಿರೀಶ್ ಪಾಟೀಲ್, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಪುರಸಭೆ ಸದಸ್ಯರಾದ ಎಂ.ಡಿ.ಉಮೇಶ್, ಪ್ರಭು ಮೇಸ್ತಿç, ಜಯಲಕ್ಷಿ÷್ಮÃ, ನಟರಾಜ, ಮುಖಂಡರಾದ ಡಾ. ಜ್ಞಾನೇಶ್, ಗುರುಕುಮಾರ್ ಪಾಟೀಲ್, ಎಂ.ನಾಗಪ್ಪ, ಎಂ.ಆರ್.ಪಾಟೀಲ್, ದೇವೇಂದ್ರಪ್ಪ ಚನ್ನಾಪುರ, ಈಶ್ವರ ಚನ್ನಪಟ್ಟಣ, ಸುರೇಶ್ ಉದ್ರಿ, ಕೀರ್ತಿರಾಜ್, ವಸುಂಧರಾ ಭಟ್ ಇತರರಿದ್ದರು.

ತಾಲೂಕಿನ ಮೂಡಿ, ಮೂಗೂರು ಏತ ನೀರಾವರಿ ಯೋಜನೆಗಳು ೬ ಕೋಟಿ ರೂ.ಗೂ ಅಽಕ ವೆಚ್ಚದಲ್ಲಿ ನಡೆದಿವೆ. ವಿದ್ಯುತ್ ಸಮಸ್ಯೆಯಿಂದ ಸಮರ್ಪಕವಾಗಿ ಕೆರೆಗೆ ನೀರು ತುಂಬಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರ ವಿದ್ಯುತ್ ವ್ಯತ್ಯಯ ಮಾಡದಂತೆ ಸಚಿವರು ಗಮನ ಹರಿಸಬೇಕು.| ಬಿ.ವೈ.ರಾಘವೇಂದ್ರಲೋಕಸಭಾ ಸದಸ್ಯ

ಟ್ಯಾಂಕರ್ ಕಾಮಗಾರಿ ಕಳಪೆ
ಕೇಂದ್ರ ಸರ್ಕಾರ ಜಿಲ್ಲೆಗೆ ಶುದ್ಧ ಕುಡಿಯುವ ನೀರಿಗಾಗಿ ೩ ಸಾವಿರ ಕೋಟಿ ರೂ. ಅನುದಾನ ನೀಡಿದೆ. ಘಟಕಗಳನ್ನು ವೀಕ್ಷಿಸಲು ಹೋದಾಗ ಜಲಜೀವನ್ ಯೋಜನೆ ಟ್ಯಾಂಕರ್ ನಿರ್ಮಾಣಕ್ಕೆ ಕೆಲವು ಗ್ರಾಮದಲ್ಲಿ ಕಳಪೆ ಕಬ್ಬಿಣ ಬಳಸಲಾಗಿದೆ ಎಂದು ತಿಳಿದುಬಂದಿದೆ. ಕೂಡಲೇ ಸರಿಪಡಿಸುವಂತೆ ಸಂಬAಽಸಿದ ಅಽಕಾರಿಗಳಿಗೆ ಸೂಚಿಸಲಾಗಿದೆ. ಸ್ಥಳೀಯ ಜನಪ್ರತಿನಿಽಗಳು ಈ ಬಗ್ಗೆ ಎಚ್ಚರ ವಹಿಸಿ ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಲು ಬಿ.ವೈ.ರಾಘವೇಂದ್ರ ಸಲಹೆ ನೀಡಿದರು.