ಜಿಲ್ಲೆ

ಸುಳ್ಳು ಪ್ರಕರಣ ದಾಖಲಿಸುವುದೇ ಕಾಂಗ್ರೆಸ್​ ಧರ್ಮ

ಕೋಲಾರ ಡೆಸ್ಕ್

ಮಾಸ್ತಿ: ಕಾಂಗ್ರೆಸ್​ ಶಾಸಕರು ಇರುವ ಕಡೆ ಸುಳ್ಳು ಕೇಸುಗಳು ದಾಖಲಿಸುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದ್ದು, ಯಾವುದೇ ತಪ್ಪು ಮಾಡದೆ ಇದ್ದರೂ ದಾಖಲೆ ಇಲ್ಲದೆ ತುರುಣಿಸಿ ಗ್ರಾಮದ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಅಟ್ರಾಸಿಟಿ ಕೇಸು ಹಾಕಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಆರೋಪಿಸಿದರು.

ಮಾಸ್ತಿ ಹೋಬಳಿಯ ತುರುಣಿಸಿ ಗ್ರಾಮದಲ್ಲಿ ಗುರುವಾರ ಕಾರ್ಯಕರ್ತ ಪವನ್​ ಅವರ ಮನೆಗೆ ಭೇಟೆ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂಭ ಮೇಳದಲ್ಲಿ ಸ್ನಾನ ಮಾಡಿದರೆ ಬಡತನ ಹೋಗುತ್ತಾ ಎಂದು ಮಲ್ಲಿಕಾರ್ಜುನ ರ್ಖಗೆ ಹೇಳಿಕೆ ನೀಡಿದ್ದರು. ಆ ಹೇಳಿಕೆಗೆ ಸಂಬಂಧಿಸಿದಂತೆ ಮಾಸ್ತಿಯ ತುರುಣಿಸಿ ಗ್ರಾಮದ ಬಿಜೆಪಿ ಕಾರ್ಯಕರ್ತರೊಬ್ಬರು ಯಾವುದೇ ವ್ಯಕ್ತಿಯನ್ನು ಟಾರ್ಗೇಟ್​ ಮಾಡದೆ, ಧರ್ಮದ ಬಗ್ಗೆ ಮಾತನಾಡಿದರೆ ಸಹಿಸುವುದಿಲ್ಲ. ನಾವು ಧರ್ಮ ರಕ್ಷಕರು ಎಂದು ಹೇಳಿಕೆ ನೀಡಿದ್ದರು. ಆದರೆ, ಸ್ಥಳಿಯ ಕಾಂಗ್ರೆಸ್​ ಶಾಸಕ ಕೆ.ವೈ.ನಂಜೇಗೌಡರು ಬಿಜೆಪಿ ಕಾರ್ಯಕರ್ತರಾದ ಪವನ್​, ಲಕ್ಷಿ$್ಮನಾರಾಯಣ, ವೇಣುಗೋಪಾಲ್​ ಎಂಬುವರ ಮೇಲೆ ಸುಳ್ಳು ಅಟ್ರಾಸಿಟಿ ಕೇಸು ದಾಖಲಿಸಿ, ರಾತ್ರೋ ರಾತ್ರಿ ಅವರನ್ನು ಬಂಧಿಸುವಂತೆ ಮಾಡಿದ್ದಾರೆ ಎಂದರು.

ಈಗಾಗಲೆ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಕಾರ್ಯಕರ್ತರ ಮನೆಗೆ ಭೇಟಿ ಕೊಟ್ಟು ಆತ್ಮಸ್ಥೆ$ರ್ಯ ತುಂಬಲಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ತಕ್ಕ ಪಾಠ ಕಲಿಸುತ್ತೇವೆ. ಇಂತಹ ಗೊಡ್ಡು ಕೇಸುಗಳಿಗೆ ಎದುರುವಂತಹ ಕಾರ್ಯಕರ್ತರು ಯಾರೂ ಇಲ್ಲ. ಈಗಾಗಲೆ ಈ ವಿಚಾರವಾಗಿ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್​ ಅವರೊಂದಿಗೆ ಮಾತನಾಡಿ ನಮ್ಮ ಕಾರ್ಯಕರ್ತರ ಮೇಲೆ ವಿನಾಕಾರಣ ಒತ್ತಾಯದ ಮೇಲೆ ಸುಳ್ಳು ಕೇಸುಗಳನ್ನು ಹಾಕಬೇಡಿ ಎಂದು ಹೇಳಿದ್ದೇವೆ ಎಂದರು.

ಮಾಜಿ ಪುರಸಭೆ ಅಧ್ಯಕ್ಷೆ ಅನಿತಾ ನಾಗರಾಜ್​, ತುರುಣಿಸಿ ಗ್ರಾಪಂ ಅಧ್ಯಕ್ಷೆ ಪ್ರಿಯಾಂಕ ಮುನಿರಾಜು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್​, ಬೆಳ್ಳಾವಿ ಸೋಮಣ್ಣ, ಶಿವಕುಮಾರ್​, ಜಿಲ್ಲಾ ಕಾರ್ಯದರ್ಶಿ ಪದ್ಮಮ್ಮ, ವೇಣು, ವೆಂಕಟೇಶ್​, ಕೆಜಿಎಫ್​ ನಾಗರಾಜ್​, ನಾಗೇಶ್​, ಸಂತೋಷ್​ ಇದ್ದರು.