ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಎಂ.ಎಲ್.ಮೂರ್ತಿ, ಡಾ.ಡಿ.ಎಲ್.ವಿಜಯ್‌ಕುಮಾರ್, ಎಚ್.ಪಿ.ಮಂಜೇಗೌಡ, ಎಚ್.ಎಚ್.ದೇವರಾಜ್, ಪ್ರವೀಣ್ ಬೆಟ್ಟಗೆರೆ ಮತ್ತಿತರರಿದ್ದರು. 
ಜಿಲ್ಲೆ

ಮುನಿರತ್ನ ವಜಾಕ್ಕೆ ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನೆ

ಚಿಕ್ಕಮಗಳೂರು: ಒಕ್ಕಲಿಗ ಮತ್ತು ದಲಿತ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಆಜಾದ್ ಪಾರ್ಕಿನ ಬಳಿ ಕಾಂಗ್ರೆಸ್ ಬಾವುಟದೊಂದಿಗೆ ಸಮಾವೇಶಗೊಂಡ ಹಲವಾರು ಕಾರ್ಯಕರ್ತರು ಶಾಸಕ ಮುನಿರತ್ನನ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ, ಮುನಿರತ್ನ ಅವರು ದಲಿತ, ಒಕ್ಕಲಿಗ ಸಮುದಾಯದ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದಾರೆ. ಇದು ಇಡೀ ಸಮಾಜವೇ ತಲೆ ತಗ್ಗಿಸುವಂತಹ ಹೀನ ಕೃತ್ಯ. ಆತನದು ಎಗ್ಗಿಲ್ಲದ ನಾಲಿಗೆ. ಇಂತಹ ಸಂಸ್ಕೃತಿ ಹೀನರನ್ನು ಜನ ಇನ್ನು ಮುಂದೆ ಆಯ್ಕೆ ಮಾಡಬಾರದು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ನಮ್ಮದು ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯವರಿಗೆ ಮಾನ, ಮರ್ಯಾದೆ ಇದ್ದರೆ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ತೆಗೆದುಹಾಕಿ ಆತನನ್ನು ಗಡಿಪಾರು ಮಾಡಿಸಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಡಿ.ಎಲ್ ವಿಜಯ್‌ಕುಮಾರ್ ಮಾತನಾಡಿ, ಶಾಸಕ ಮುನಿರತ್ನ ದಬ್ಬಾಳಿಕೆ ಪ್ರದರ್ಶಿಸಿದ್ದಾರೆ. ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾತಾಡಿದ್ದಾರೆ. ಕಸ ವಿಲೇವಾರಿ ಸಂಬAಧ ಗುತ್ತಿಗೆದಾರನಿಗೆ ನಿಂದಿಸಿ ಅವಾಚ್ಯ ಶಬ್ಧ ಬಳಸಿರುವುದು ಖಂಡನೀಯ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ವಕ್ತಾರ ಎಚ್.ಎಚ್ ದೇವರಾಜ್, ಪ್ರಮುಖರಾದ ಪ್ರವೀಣ್ ಬೆಟ್ಟಗೆರೆ, ಸುದೀಪ್, ರಾಘವೇಂದ್ರ, ಪ್ರಕಾಶ್, ನಾಗಭೂಷಣ್, ನಾಗೇಶ್, ಶಿವಾನಂದ, ಪರಮೇಶ್ ರಾಜ್ ಅರಸ್, ಜಗದೀಶ್, ಸುರೇಶ್, ಹುಣಸೆಮುಕ್ಕಿ ಲಕ್ಷö್ಮಣ್, ಫೈಯಾಜ್, ಬಾಬು, ರಾಘವೇಂದ್ರ, ಲೋಕೇಶ್, ಯಶೋಧ, ಅನೀಸ್‌ಖೈಸರ್, ಮಲ್ಲೇಶಸ್ವಾಮಿ, ಡಿ.ಸಿ.ಪುಟ್ಟೇಗೌಡ ಮತ್ತಿತರರಿದ್ದರು.