ರಾಜ್ಯಪಾಲರ ನಡೆ ಖಂಡಿಸಿ ಬನಹಟ್ಟಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ರಾಜೇಂದ್ರ ಭದ್ರನ್ನವರ, ಮಲ್ಲಪ್ಪ ಸಿಂಗಾಡಿ ಇತರರಿದ್ದರು. 
ಜಿಲ್ಲೆ

ರಾಜ್ಯಪಾಲರ ನಡೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ರಬಕವಿ-ಬನಹಟ್ಟಿ: ರಾಜ್ಯಪಾಲರ ನಡೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಅವಳಿನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯಪಾಲ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಭಾವಚಿತ್ರ ದಹಿಸಲಾಯಿತು.

ಬನಹಟ್ಟಿ ಎಂ.ಎಂ. ಬಂಗ್ಲೆ ಎದಿರು ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿ ಕೆಲ ಹೊತ್ತು ಬಂದ್ ಮಾಡಿ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಕೂಡಲೇ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ನೀಡಿರುವುದನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

ನಂತರ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ಬಿಜೆಪಿಯವರ ಕೈಗೊಂಬೆಯಂತೆ ರಾಜ್ಯಪಾಲರು ವರ್ತಿಸುತ್ತಿದ್ದಾರೆ. ದೇಶದ ಪ್ರಜಾಪ್ರಭುತ್ವ ಕೊಲ್ಲುತ್ತಿದ್ದಾರೆ. ಜನರು ಅವರನ್ನು ತಿರಸ್ಕರಿಸಿದ ಕಾರಣ ಈ ರೀತಿ ಕೆಲಸವಿಲ್ಲದೆ ಕಾನೂನು ಬಾಹಿರವಾಗಿ ವರ್ತಿಸುತ್ತಿದ್ದಾರೆ ಎಂದು ದೂರಿದರು.

ಬನಹಟ್ಟಿಯಿಂದ ಪ್ರತಿಭಟನೆಯಲ್ಲಿ ವಿವಿಧ ಘೋಷಣೆಗಳನ್ನು ಕೂಗುತ್ತ ಕಾಲೇಜ್ ಮಾರ್ಗವಾಗಿ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣ ದೇಸಾರಟ್ಟಿ, ಬನಹಟ್ಟಿ ಘಟಕದ ಅಧ್ಯಕ್ಷ ರಾಜೇಂದ್ರ ಭದ್ರನ್ನವರ, ರಾಹುಲ್ ಕಲಾಲ, ಹನುಮಂತ ಬರಗಾಲ, ಅಶೋಕ ಉಳ್ಳಾಗಡ್ಡಿ, ಓಂಪ್ರಕಾಶ ಮನಗೂಳಿ, ಶ್ರೀಶೈಲ ಮೇಣಿ, ಸತ್ಯಪ್ಪ ಮಗದುಮ್, ಮಾರುತಿ ಸೊರಗಾಂವಿ, ನೀಲೇಶ ದೇಸಾಯಿ, ದೇವಪ್ಪ ಮಹೇಷವಾಡಗಿ, ಸಂಗಪ್ಪ ಕುಂದಗೋಳ, ಸಂಜು ಜೋತಾವರ, ಹಾರುನ ಸಾಂಗ್ಲಿಕರ, ಮಾಯಪ್ಪ ಕರಿಜ್ಯೋತಿ, ರಾಜೇಶ್ವರಿ ಕಾಂಬಳೆ, ರಂಗನಗೌಡ ಪಾಟೀಲ, ಹರ್ಷವರ್ದನ್ ಪಟವರ್ದನ, ಮಾನಿಂಗ ಮುಧೋಳ ಇತರರಿದ್ದರು.