ಜಿಲ್ಲೆ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉಚಿತ ಸೌಲಭ್ಯ

ಅಶೋಕ್ ಕುಮಾರ್ ಎನ್

ಕವಿತಾಳ: ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯವೆಂದು ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ಬಸ್ಸಾಪೂರದಲ್ಲಿ ಬೂತ್ ಮಟ್ಟದ ಸಂಘಟನಾ ಸಭೆ ಮತ್ತು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬದ ಮಹಿಳೆಗೆ 2 ಸಾವಿರ ರೂಪಾಯಿ, ಬಡವರಿಗೆ ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಅನ್ನು ಉಚಿತ ನೀಡಲಾಗುವುದು ಎಂದರು. ತಾಪಂ ಮಾಜಿ ಸದಸ್ಯ ಕರಿಯಪ್ಪ, ಪ್ರಮುಖರಾದ ಸಿದ್ದನಗೌಡ ಮಟ್ಟೂರು, ಬಸಪ್ಪ ಜಂಗಮರಹಳ್ಳಿ, ಸುರೇಶ ತೋರಣದಿನ್ನಿ, ಶರಣೇಗೌಡ ಬಸ್ಸಾಪೂರ, ಹಳ್ಳಪ್ಪ ಇದ್ದರು.