ಜಿಲ್ಲೆ

ಕಾಂಗ್ರೆಸ್​ ಕಚೇರಿ ಪಕ್ಷ ಸಂಘಟನೆಗೆ ಅನುಕೂಲ

ಸೋಮಲಿಂಗ ತಳವಾರ

ಚಿಕ್ಕೋಡಿ: ಪಟ್ಟಣದಲ್ಲಿ ನಿರ್ಮಾಣವಾದ ನಾಗರಮುನ್ನೋಳಿ ಬ್ಲಾಕ್​ ಕಾಂಗ್ರೆಸ್​ ಕಚೇರಿಯಿಂದ ಕಾಂಗ್ರೆಸ್​ ಕಾರ್ಯಕರ್ತರು ಹಾಗೂ ಜನರಿಗೆ ಅನುಕೂಲವಾಗಲಿದೆ. ಜತೆಗೆ ಪ ಸಂಘಟನೆಗಾಗಿ ಸಹಕಾರಿಯಾಗುತ್ತದೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ರಾಯಬಾಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಗರಮುನ್ನೋಳಿ ಬ್ಲಾಕ್​ ಕಾಂಗ್ರೆಸ್​ ಕಚೇರಿಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಕೆಪಿಸಿಸಿ ಕಾರ್ಯದರ್ಶಿ ಮಹಾವೀರ ಮೊಹಿತೆ ಸ್ವಂತ ಖರ್ಚಿನಿಂದ ಕಚೇರಿ ನಿರ್ಮಾಣ ಮಾಡಿ ಪಕ್ಕೆ ಕೊಡುಗೆ ನೀಡಿದ್ದಾರೆ ಎಂದರು.

ವಿಧಾನ ಪರಿಷತ್​ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಹುಕ್ಕೇರಿ, ರಾಯಬಾಗ, ಚಿಕ್ಕೋಡಿ, ನಿಪ್ಪಾಣಿ, ಅಥಣಿ, ಕಾಗವಾಡ, ಸೇರಿ ಎಲ್ಲ ವಿಧಾನಸಭಾ ೇತ್ರಗಳಿಗೆ ಅಭಿವೃದ್ಧಿಗಾಗಿ ಅನುದಾನ ಒದಗಿಸಲಾಗಿದೆ ಎಂದರು. ಕೆಪಿಸಿಸಿ ಕಾರ್ಯದರ್ಶಿ ಮಹಾವೀರ ಮೋಹಿತೆ ಮಾತನಾಡಿ, ಪ ಸಂಟನೆ ಈ ಕಾರ್ಯಾಲಯದ ಉದ್ದೇಶವಾಗಿದೆ ಎಂದರು.

ಚಿಕ್ಕೋಡಿ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಲಕ್ಷ$್ಮಣರಾವ ಚಿಂಗಳೆ, ಸಿದ್ದಪ್ಪ ಮರ್ಯಾಯಿ, ಶಿವು ಪಾಟೀಲ, ಎಚ್​.ಎಸ್​.ನಸಲಾಪುರೆ, ಪ್ರಭಾಕರ ಕೋರೆ, ರಾಜು ಕೋಟಗಿ, ಶಂಕರಗೌಡ ಪಾಟೀಲ, ರಮೇಶ ಪಾಟೀಲ, ನಿರ್ಮಲಾ ಪಾಟೀಲ, ಗಣೇಶ ಮೋಹಿತೆ, ಶ್ಯಾಮ ರೇವಡೆ, ಸಂತೋಷ ನವಲೆ, ದಿಲೀಪ ಜಮಾದಾರ, ಅರ್ಜುನ ಬಂಡಗರ, ಸುರೇಶ ರಬುಡೆ ಇತರರಿದ್ದರು.