ಜಿಲ್ಲೆ

ವಿಧಾನ ಪರಿಷತ್ ಉಪ ಚುನಾವಣೆ : ಕೆಪಿಸಿಸಿಯಿಂದು ಉಸ್ತುವಾರಿಗಳ ನೇಮಕ

Mangaluru - Hariprasad Rai


ಮಂಗಳೂರು : ದಕ್ಷಿಣ ಕನ್ನಡ ಸ್ಥಳೀಯಾಡಳಿತ ಸಂಸ್ಥೆಗಳ ವಿಧಾನ ಪರಿಷತ್ ಸ್ಥಾನಕ್ಕೆ ನಡೆಯಲಿರುವ ಉಪ ಚುನಾವಣೆ ಹಿನ್ನೆಲೆಯಲ್ಲಿ
ಪ್ರಚಾರ ಕಾರ್ಯ ನಡೆಸಲು ದ.ಕ. ಮತ್ತು ಉಡುಪಿ ಜಿಲ್ಲೆಗಳಿಗೆ ಚುನಾವಣಾ ಉಸ್ತುವಾರಿಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿಯೋಜಿಸಿದ್ದಾರೆ.ಉಭಯ ಜಿಲ್ಲೆಗಳ ಉಸ್ತುವಾರಿಗಳಾಗಿ ಕೆಪಿಸಿಸಿಯ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನಿಯೋಜಿಸಲಾಗಿದೆ.
ದ.ಕ.ಜಿಲ್ಲಾ ಉಸ್ತುವಾರಿಗಳಾಗಿ ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಶಾಸಕ ಅಶೋಕ್ ಕುಮಾರ್‌ರೈ, ಮಾಜಿ ಶಾಸಕ ಜೆ.ಆರ್.ಲೋಬೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಿಥುನ್ ರೈ, ರಕ್ಷಿತ್ ಶಿವರಾಂ, ಇನಾಯತ್ ಅಲಿ,
ಜಿ.ಕೃಷ್ಣಪ್ಪ, ಉಸ್ತುವಾರಿ ಪದಾಧಿಕಾರಿಗಳಾಗಿ ಎಂ.ಸಿ.ವೇಣುಗೋಪಾಲ್, ವೆಂಕಟೇಶ್ ಹೆಗಡೆ, ಜಿ.ಎ.ಬಾವಾ, ನಿವೇದಿತ್
ಆಳ್ವ, ಲಲಿತ್ ರಾಘವ್ , ಜುಲ್ಫಿಕರ್ ಅಹಮದ್ ಖಾನ್, ಮೆಟಿಲ್ಡಾ ಡಿಸೋಜ, ಪ್ರವೀಣ್ ಪೀಟರ್, ಜಿಲ್ಲಾ ಸಂಚಾಲಕರಾಗಿ ಪದ್ಮರಾಜ್, ಕೆಪಿಸಿಸಿ ಕಾರ್ಯಾಧ್ಯಕ್ಷರ ಸಂಯೋಜಕರಾಗಿ ಬಿ.ಬಾಲರಾಜ್ ಅವರನ್ನು ನಿಯೋಜಿಸಲಾಗಿದೆ.
ಉಡುಪಿ ಜಿಲ್ಲಾ ಉಸ್ತುವಾರಿಗಳಾಗಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ, ಎಂಎಲ್‌ಸಿ ಐವನ್ ಡಿಸೋಜ, ಕೆ.ಗೋಪಾಲ ಪೂಜಾರಿ, ಸುಕುಮಾರಶೆಟ್ಟಿ, ಎಂ.ದಿನೇಶ್ ಹೆಗ್ಡೆ, ಪ್ರಸಾದ್‌ರಾಜ್ ಕಾಂಚನ್, ಉದಯ ಕುಮಾರ್ ಶೆಟ್ಟಿ, ಉಸ್ತುವಾರಿ
ಪದಾಧಿಕಾರಿಗಳಾಗಿ ಮಂಜುನಾಥ ಗೌಡ, ಇನಾಯತ್ ಅಲಿ, ಮಿಥುನ್ ರೈ, ರಕ್ಷಿತ್ ಶಿವರಾಂ, ಲಾವಣ್ಯ ಬಳ್ಳಾಲ್, ಜಿಲ್ಲಾ ಸಂಚಾಲಕರಾಗಿ ಜಯಪ್ರಕಾಶ್ ಹೆಗ್ಡೆ, ಕೆಪಿಸಿಸಿ ಕಾರ್ಯಾಧ್ಯಕ್ಷರ ಸಂಯೋಜಕರಾಗಿ ಎಂ.ಎಸ್.ಮಹಮ್ಮದ್ ಅವರನ್ನು ನೇಮಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.