ಜಿಲ್ಲೆ

ಕಾಂಗ್ರೆಸ್​ ಬ್ಯಾನರ್​ನಲ್ಲಿ ಸಂಗಟಿ ಫೋಟೋ ! ಅನ್ಸಾರಿ ಫ್ಯಾನ್ಸ್​ ಗರಂ

congress mp election meeting iqbal andari kariyanna sangati fans war

ಕೊಪ್ಪಳ: ಕೊಪ್ಪಳ ಲೋಕಸಭೆ ಚುನಾವಣೆ ಪೂರ್ವಭಾವಿ ಸಭೆ ಹಿನ್ನೆಲೆಯಲ್ಲಿ ಕಾಂಗ್ರೆಸ್​ ನಾಯಕರು ಎಲ್ಲೆಡೆ ಪ್ಲೆಕ್ಸ್​, ಬ್ಯಾನರ್​ ಅಳವಡಿಸಿದ್ದಾರೆ. ಇದರಲ್ಲಿ ವಿಪ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಫೋಟೋ ಸಹ ಇದ್ದು, ಮಾಜಿ ಸಚಿವ ಇಕ್ಬಾಲ್​ ಅನ್ಸಾರಿ ಫ್ಯಾನ್ಸ್​ ಗರಂ ಆಗಲು ಕಾರಣವಾಗಿದೆ.

ಅಬಕಾರಿ ಸಚಿವ ಆರ್​.ಬಿ.ತಿಮ್ಮಾಪುರ ಅವರನ್ನು ಕೊಪ್ಪಳ ಲೋಕಸಭೆ ಚುನಾವಣೆ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಬುಧವಾರ ಶಿವಶಾಂತವೀರ ಮಂಗಲ ಭವನದಲ್ಲಿ ಸಭೆ ನಡೆದಿದೆ. ಸಚಿವರಿಗೆ ಶುಭ ಕೋರಿ ಹಾಕಿರುವ ಬ್ಯಾನರ್​ನಲ್ಲಿ ಈ ಮೊದಲು ಕಾಂಗ್ರೆಸ್​ನಲ್ಲಿದ್ದ ಕರಿಯಣ್ಣ ಸಂಗಟಿ ಫೋಟೋ ಸಹ ಬ್ಯಾನರನಲ್ಲಿ ಹಾಕಲಾಗಿದೆ.

ಕರಿಯಣ್ಣ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ತೊರೆದು ಕೆಆರ್​ಪಿಪಿ ಸೇರಿ ಜನಾರ್ದನ ರೆಡ್ಡಿಯನ್ನು ಬೆಂಬಲಿಸಿದ್ದಾರೆ. ಕೈ ಅಭ್ಯರ್ಥಿ ಇಕ್ಬಾಲ್​ ಅನ್ಸಾರಿಯನ್ನು ಸೋಲಿಸಿದ್ದಾರೆ. ಅವರ ಫೋಟೋ ಯಾಕೆ ಹಾಕಿದ್ದಾರೆ.

ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಇದೆಲ್ಲವನ್ನು ಗಮನಿಸುವುದಿಲ್ಲವಾ ? ಇವರು ಏನೂ ಮಾಡಿದರೂ ಪಕ್ಷದಲ್ಲಿ ನಡೆಯುತ್ತಾ ಎಂದು ಅನ್ಸಾರಿ ಅಭಿಮಾನಿಗಳು ಗರಂ ಆಗಿದ್ದಾರೆ.

ಈ ಸಂಬಂಧ ವಾಟ್ಸಾಪ್​ ಮತ್ತು ಫೇಸ್ ಬುಕ್ ನಲ್ಲಿ ಬಿಸಿ ಬಿಸಿ ಚರ್ಚೆ ನಡೆಸಿದ್ದು, ಪಕ್ಷ ವಿರೋಧಿ ಚಟುವಟಿಕೆಗೆ ಖಂಡಿಸಿದ್ದಾರೆ.