ಜಿಲ್ಲೆ

ಕೇಂದ್ರದಿಂದ ಸಿಐಐ, ಇಡಿ, ಐಟಿ ದುರ್ಬಳಕೆ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಕೇಂದ್ರೀಯ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ ಸೇರಿದಂತೆ ಎಲ್ಲವನ್ನೂ ಕೇಂದ್ರ ಸರ್ಕಾರವು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಸಂಸದ ಡಾ.ಶಶಿ ತರೂರ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಇಲಾಖೆಗಳು ರಾಜಕೀಯವಾಗಿ ಬಳಕೆ ಆಗಬಾರದು. ಎಲ್ಲಾ ಇಲಾಖೆಗಳ ದಾಳಿ, ತನಿಖೆ ವಿಪಕ್ಷಗಳ ಮುಖಂಡರ ವಿರುದ್ಧವೇ ಆಗುತ್ತಿದೆ. ನಮ್ಮೆಲ್ಲರ ವಿರುದ್ಧನೂ ಕೇಸ್ ಮಾಡಿಬಿಡಿ. ಕೊನೆಯಲ್ಲಿ ಜನತೆಯೇ ಚುನಾವಣೆಯಲ್ಲಿ ನಿರ್ಧಾರ ಮಾಡುತ್ತಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ರಿಲೀಫ್ ಸಿಕ್ಕಿರೋದು ತುಂಬಾ ಒಳ್ಳೆ ವಿಚಾರ. ನ್ಯಾಯಾಂಗ ಸ್ವತಂತ್ರವಾಗಿರೋದು ಒಳ್ಳೆ ವಿಚಾರ ಎಂದರು.

ಪಂಚರಾಜ್ಯಗಳ ಚುನಾವಣೆಯ ಮಧ್ಯಪ್ರದೇಶ ಮತ್ತು ಚತ್ತೀಸಘಡದಲ್ಲಿ ನಾವು ಮುಂದಿದ್ದೇವೆ. ತೆಲಂಗಾಣದಲ್ಲು ಕಾಂಗ್ರೆಸ್ ಪರ ಒಳ್ಳೆ ಫಲಿತಾಂಶ ಬರಲಿದೆ. ಮಿಜೋರಾಂನಲ್ಲಿ ನಾವು ಕನಿಷ್ಟ ದೊಡ್ಡ ಪಕ್ಷವಾಗಿ ಹೊರ ಹೊಮ್ಮುತ್ತೇವೆ. ಲೋಕಸಭಾ ಚುನಾವಣೆಯಲ್ಲು ಕಾಂಗ್ರೆಸ್ ಒಳ್ಳೆಯ ಸಾಧನೆ ಮಾಡಲಿದೆ ಎಂದು ತರೂರ್ ತಿಳಿಸಿದರು. ಕರ್ನಾಟಕದಲ್ಲಿ ದಲಿತ ಸಿಎಂ ಕೂಗು ವಿಚಾರ ಬಗ್ಗೆ ನಾನು ಏನೂ ಪ್ರತಿಕ್ರಿಯೆ ನೀಡಲ್ಲ. ಈ ಬಗ್ಗೆ ಪಕ್ಷ ನಿರ್ಧಾರ ಮಾಡಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ಆದೇಶ ಹಿಂಪಡೆದಿದ್ದ ಸಂಪುಟ ನಿರ್ಧಾರಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿರುವುದು ಒಳ್ಳೆಯ ವಿಚಾರ. ಹಿಂದೆ ಬಿಜೆಪಿ ಸರ್ಕಾರ ತಪ್ಪು ಮಾಡಿತ್ತು. ಅವರು ಸ್ಪೀಕರ್ ಅನುಮತಿ ಇಲ್ಲದೇ ಸಿಬಿಐಗೆ ಕೊಟ್ಟಿದ್ದರು. ಹಾಗಾಗಿ, ನಾವು ವಾಪಸ್ ಪಡೆದಿದ್ದೆವು. ಈ ವಿಚಾರವನ್ನು ಕೋರ್ಟ್ ಗಮನಕ್ಕೆ ತಂದಿದ್ದು ಅದನ್ನು ಮಾನ್ಯ ಮಾಡಿದೆ. ಡಾ.ಜಿ.ಪರಮೇಶ್ವರ ಗೃಹ ಸಚಿವ