ಜಿಲ್ಲೆ

ಕಾಂಗ್ರೆಸ್ ಎಂಎಲ್​ಸಿ ನಸೀರ್ ಅಹ್ಮದ್ ಪುತ್ರ ಫಯಾಜ್​ ಅಹ್ಮದ್ ಅರೆಸ್ಟ್

ಬೆಂಗಳೂರು: ಕರ್ತವ್ಯ ನಿರತರಾಗಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಕಾಂಗ್ರೆಸ್ ಎಂಎಲ್​ಸಿ ನಾಸಿರ್ ಅಹ್ಮದ್ ಪುತ್ರ ಫಯಾಜ್ ಅಹ್ಮದ್ ಮತ್ತು ಆತನ ಗೆಳೆಯರನ್ನು ಪೊಲೀಸರು ನಿನ್ನೆ ತಡರಾತ್ರಿ ಬಂಧಿಸಿದ್ದಾರೆ.

ಹೆಬ್ಬಾಳ ಸಮೀಪದ ಬಿಎಂಟಿಸಿ ಬಸ್​ ಡಿಪೋ ಬಳಿ ಡ್ರಿಂಕ್ ಆ್ಯಂಡ್ ಡ್ರೈವ್ ಕೇಸ್​ನಲ್ಲಿ ಪೊಲೀಸರ ಬಲೆಗೆ ಬಿದ್ದ ಫಯಾಜ್ ಮತ್ತು ಅವರ ಇಬ್ಬರು ಸ್ನೇಹಿತರು ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಭಾನುವಾರ ಮಧ್ಯರಾತ್ರಿ 12.30ರ ಸುಮಾರಿಗೆ ಈ ಪ್ರಕರಣ ನಡೆದಿದ್ದು, ಪೊಲೀಸರು ಫಯಾಜ್​ ಸೇರಿ ಮೂವರ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ.

ಕಾರನ್ನು ತಡೆದು ವಿಚಾರಣೆ ನಡೆಸಲು ಮುಂದಾದಾಗ, ಮದ್ಯದ ನಶೆಯಲ್ಲಿದ್ದ ಫಯಾಜ್​ ಹೆಡ್​ಕಾನ್​ಸ್ಟೆಬಲ್ ಮತ್ತು ಜತೆಗಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಆತನ ಜತೆಗಿದ್ದ ಸ್ನೇಹಿತರೂ ಹಲ್ಲೆ ನಡೆಸುವಲ್ಲು ಭಾಗಿಯಾಗಿದ್ದು, ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಅಮೃತಹಳ್ಳಿ ಪೊಲೀಸರು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)