ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಸಹಕಾರಿ ಬ್ಯಾಂಕ್ನಿಂದ ಕಾಂಗ್ರೆಸ್ನವರನ್ನು ದೂರ ಮಾಡದೇ ಹೋದರೆ ಎರಡೂ ಜಿಲ್ಲೆಗಳಲ್ಲಿ ಬಿಜೆಪಿ ಗೆಲುವು ಕಷ್ಟವಾಗುತ್ತದೆ ಎಂಬ ಚರ್ಚೆಗಳು ಬಿಜೆಪಿಯಲ್ಲಿ ಆರಂಭವಾಗಿವೆ.
ಮಹಿಳಾ ಸಂಗಳಿಗೆ ಸಾಲ ಕೊಡುವುದನ್ನು ತಡೆದರೆ ನಮಗೂ ತೊಂದರೆಯಾಗುತ್ತದೆ. ಆದ್ದರಿಂದ ಸರ್ಕಾರದ ಮೇಲೆ ಒತ್ತಡ ತಂದು ಸಾಲ ನೀಡುವ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಶಾಸಕರು ಹೋಗದಂತೆ ತಡೆಯಬೇಕು ಎಂದು ಮುಖಂಡರ ಅಭಿಪ್ರಾಯವಾಗಿದೆ.
ಮುಖ್ಯಮಂತ್ರಿಗಳ ಒಂದು ವರ್ಷದ ಸಾಧನಾ ಸಮಾವೇಶಕ್ಕಾಗಿ ಸೋಮವಾರ ಶ್ರೀನಿವಾಸಪುರಕ್ಕೆ ಆರೋಗ್ಯ ಸಚಿವ ಕೆ.ಸುಧಾಕರ್, ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ಹಾಗೂ ಜಿಲ್ಲೆಯ ಬಿಜೆಪಿ ಮುಖಂಡರು ಆಗಮಿಸಿದ್ದ ವೇಳೆ ಜಿಲ್ಲಾಧ್ಯ ಡಾ.ವೇಣುಗೋಪಾಲ್ ಮನೆಯಲ್ಲಿ ಏರ್ಪಡಿಸಲಾಗಿದ್ದ ಔತಣ ಕೂಟದ ನಂತರ ಡಿಸಿಸಿ ಬ್ಯಾಂಕ್ ಬಗ್ಗೆ ಬಿಜೆಪಿ ನಾಯಕರು ಚರ್ಚೆ ನಡೆಸಿದರು. ಈ ವೇಳೆ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಸಾಲ ವಿತರಣೆ ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯರು ಕಾಂಗ್ರೆಸ್ ಶಾಸಕರನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಮುಂದಿನ 2023ರ ಚುನಾವಣೆಗೆ ತೊಂದರೆಯಾಗುತ್ತದೆ. ಆದ್ದರಿಂದ ಇದನ್ನು ತಡೆಯಬೇಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರಿಗೆ ತಿಳಿಸಲಾಗಿದೆ. ಅವರು ಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಗುವುದು ಎಂದಿದ್ದಾರೆ ಎಂದರು.
ಇತ್ತೀಚೆಗೆ ಡಿಸಿಸಿ ಬ್ಯಾಂಕ್ ಅಧ್ಯ ಗೋವಿಂದಗೌಡರ ಬಗ್ಗೆ ಮೃದು ಧೋರಣೆ ಹೊಂದಿರುವ ಸಚಿವ ಕೆ.ಸುಧಾಕರ್, ರಮೇಶ್ ಕುಮಾರ್ ಸೇರಿ ಕಾಂಗ್ರೆಸ್ ಶಾಸಕರೇ ಗೋವಿಂದಗೌಡರಿಗೆ ಗೂಸಾ ನೀಡಿದ್ದಾರೆ. ಅವರೇ ದೂರ ಸರಿಯುವ ದಿನಗಳು ದೂರವಿಲ್ಲ ಎಂದಾಗ ಕೆಜಿಎಫ್ ಮಾಜಿ ಶಾಸಕ ವೈ.ಸಂಪಂಗಿ, ಇದನ್ನು ತಡೆಯಲೇಬೇಕು, ಇಲ್ಲದಿದ್ದರೆ ಜಿಲ್ಲೆಯಲ್ಲಿ ಒಂದು ಸ್ಥಾನವನ್ನೂ ಗೆಲ್ಲಲು ಕಷ್ಟವಾಗುತ್ತದೆ ಎಂದರು. ಅದಕ್ಕೆ ಮಾಜಿ ಸಚಿವ ವರ್ತೂರು ಪ್ರಕಾಶ್ ಇತರರು ಧ್ವನಿಗೂಡಿಸಿದ್ದಾರೆ.
ಡಿಸಿಸಿ ಬ್ಯಾಂಕ್ ಬಗ್ಗೆ ಸಂಸದ ಮುನಿಸ್ವಾಮಿ, ಮಾಜಿ ಶಾಸಕ ಸಂಪಂಗಿ, ಜೆಡಿಎಸ್ ಜಿಲ್ಲಾಧ್ಯ ವೆಂಕಟಶಿವಾರೆಡ್ಡಿ, ಸಚಿವ ಸುಧಾಕರ್ ಎಲ್ಲರೂ ಮುಗಿ ಬೀಳುತ್ತಿದ್ದರು. ಕಳೆದ ಎಂಎಲ್ಸಿ ಚುನಾವಣೆಯ ನಂತರ ಸಚಿವ ಸುಧಾಕರ್ ಹಾಗೂ ಜಿ.ಕೆ.ವೆಂಕಟಶಿವಾರೆಡ್ಡಿ ಮೃದುಧೋರಣೆ ತೋರಿದ್ದು, ವೈ.ಎ ನಾರಾಯಣಸ್ವಾಮಿ ಸಮರ ಸಾರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವೈ.ಎ.ನಾರಾಯಣಸ್ವಾಮಿ ಡಿಸಿಸಿ ಬ್ಯಾಂಕ್ ಕಥೆ ಚುನಾವಣೆ ಒಳಗಾಗಿ ಮುಗಿಯುತ್ತದೆ ಎಂದು ಮಾರ್ಮಿಕವಾಗಿ ನುಡಿದರು.