ಕುಡಚಿ: ಯುವಕರು ಹೆಚ್ಚು, ಹೆಚ್ಚು ಕಾಂಗ್ರೆಸ್ ಸದಸ್ಯತ್ವ ಪಡೆಯವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಯುವ ಶಕ್ತಿ ಹೆಚ್ಚಿಸಬೇಕು ಎಂದು ಯುವ ಮುಖಂಡ ರಾಹುಲ ಜಾರಕಿಹೊಳಿ ಹೇಳಿದರು.
ಪಟ್ಟಣಕ್ಕೆ ಬುಧವಾರ ಭೇಟಿ ನೀಡಿ ಯುವ ಕಾಂಗ್ರೆಸ್ ಸದಸ್ಯರ ಸಭೆ ನಡೆಸಿ ಮಾತನಾಡಿದ ಅವರು, ಕರ್ನಾಟಕ ಪ್ರದೇಶ ಯೂತ್ ಕಾಂಗ್ರೆಸ್ ಚುನಾವಣೆ 2024 ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದು, ಹೆಚ್ಚಿನ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಯೂತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ, ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ, ವಿಧಾನಸಭಾ ಕ್ಷೇತ್ರದ ಅಧ್ಯಕ್ಷ, ಕುಡಚಿ ಗ್ರಾಮೀಣ ಮತ್ತು ನಗರ ಸೇರಿ ವಿವಿಧ ಸ್ಥಾನಗಳಿಗೆ ಸ್ಪರ್ಧಿಸಿರುವ ನಮ್ಮ ಪ್ಯಾನಲ್‌ನಲ್ಲಿರುವ ಎಲ್ಲರನ್ನೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಯುವ ಮುಖಂಡ ಅಮಿತ ಘಾಟಗೆ ಮಾತನಾಡಿ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ರಾಹುಲ ಜಾರಕಿಹೊಳಿ ಹಾಗೂ ಪ್ಯಾನಲ್‌ನ ಎಲ್ಲರಿಗೂ ಹೆಚ್ಚಿನ ಬೆಂಬಲ ಕೊಡುವುದಾಗಿ ತಿಳಿಸಿದರು.
ಪುರಸಭೆ ಅಧ್ಯಕ್ಷ ಹಮಿದೋದ್ದೀನ್ ರೋಹಿಲೆ, ಸಹದೀಕ್ ಸಜ್ಜನ, ರೇವಣ್ಣ ಸರವ, ಸಂಜೀವ ಬಾನೆ, ಸುಖಮಾರ ಪಾಟೀಲ, ಮುರಾರಿ ಬಾನೆ, ಮುಶ್ಫಾಕ್ ಜಿನ್ನಾಬಡೆ, ಯಲ್ಲಪ್ಪ ಶಿಂಗೆ, ಮುಸಧೀಕ್ ಖರಿಮಖಾನ್‌ಇತರರು ಇದ್ದರು.