ವಿಜಯವಾಣಿ ಸುದ್ದಿಜಾಲ ಧಾರವಾಡ
ಗಾಂಽ ಜಯಂತಿ ಹಾಗೂ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಽವೇಶನಕ್ಕೆ 100 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ತಾಲೂಕಿನ ಗರಗ ಶ್ರೀ ಮಡಿವಾಳೇಶ್ವರ ಮಠದಿಂದ ಗ್ರಾಮದ ಖಾದಿ ಗ್ರಾಮದ್ಯೋಗ ಕೇಂದ್ರದವರೆಗೆ ಕಾಂಗ್ರೆಸ್‌ನಿ0ದ ಬುಧವಾರ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಶ್ರೀಮಠದಲ್ಲಿ ಪೂಜೆ ಸಲ್ಲಿಸಿ ಆರಂಭಗೊ0ಡ ಪಾದಯಾತ್ರೆಯು ಗ್ರಾಮದ ಓಣಿಗಳಲ್ಲಿ ಸಂಚರಿಸಿತು. ಮಹಾತ್ಮಾ ಗಾಂಧೀ ವೃತ್ತದಲ್ಲಿರುವ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಖಾದಿ ಗ್ರಾಮದ್ಯೋಗ ಕೇಂದ್ರದಲ್ಲಿ ಸಭೆ ನಡೆಸಲಾ¬ತು.
ಅಧ್ಯಕ್ಷತೆ ವಹಿಸಿದ್ದ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕಿ ಶಿವಲೀಲಾ ಕುಲಕರ್ಣಿ ಮಾತನಾಡಿ, ಕುಂದಾನಗರಿ ಬೆಳಗಾವಿ ಹಲವು ಐತಿಹಾಸಿಕ ಘಟನಾವಳಿಗೆ ಸಾಕ್ಷಿಯಾದ ನಗರ. ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಽವೇಶನಕ್ಕೆ ಈಗ ಶತಮಾನದ ಸಂಭ್ರಮ. ಟೆಂಟ್‌ನಲ್ಲಿ ವಾಸ್ತವ್ಯ ಮಡಿದ್ದ ಗಾಂಧೀಜಿಯವರ ಸರಳತೆ ಎಲ್ಲರಿಗೂ ಮಾದರಿ ಎಂದರು.
ಬ್ಲಾಕ್ ಅಧ್ಯಕ್ಷ ಅರವಿಂದ ಏಗನಗೌಡರ, ಈಶ್ವರ ಶಿವಳ್ಳಿ, ಶಿವಾನಂದ ಹೊಳೆಹಡಗಲಿ ಮಾತನಾಡಿದರು.
ಚನಬಸಪ್ಪ ಮಟ್ಟಿ, ಸಿದ್ದಣ್ಣ ಪ್ಯಾಟಿ, ಅಶೋಕ ದೊಡ್ಡಮನಿ, ರಾಜಶೇಖರ ಕಮತಿ, ದೀಪಾ ನೀರಲಕಟ್ಟಿ, ಸೂರವ್ವ ಪಾಟೀಲ, ಪ್ರಕಾಶ ಘಾಟಗೆ, ರೇಣುಕಾ ಕಳ್ಳಿಮನಿ, ರುದ್ರಪ್ಪ ಉಳವಣ್ಣವರ, ಪರಮೇಶ ಕಾಳೆ, ಶೇಕಪ್ಪ ಕುಂಬಾರ, ಇತರರು ಭಾಗವಹಿಸಿದ್ದರು.