congress, leaders, join, to BJP,ಕಾಂಗ್ರೆಸ್‌ನ, ಮುಖಂಡರು, ಬಿಜೆಪಿ, ಸೇರ್ಪಡೆ
ಬ್ರಹ್ಮಾವರ: ವಾರಂಬಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಸೇರಿ ಕಾಂಗ್ರೆಸ್ ಮುಖಂಡರು ಬುಧವಾರ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಬಿಜೆಪಿ ತತ್ವ ಸಿದ್ಧಾಂತ ಮೆಚ್ಚಿ ಹಾಗೂ ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸ ಬೆಂಬಲಿಸಿ ವಾರಂಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಎರಡು ಬಾರಿ ಕಾಂಗ್ರೆಸ್ ಸದಸ್ಯರಾಗಿ, ಅಧ್ಯಕ್ಷರಾಗಿದ್ದ ನಿತ್ಯಾನಂದ ಬಿ.ಆರ್.ವಾರಂಬಳ್ಳಿ, ಗ್ರಾಪಂ ಮಾಜಿ ಅಧ್ಯಕ್ಷರು, ಕಾಂಗ್ರೆಸ್ ಎಸ್.ಸಿ.ಮೋರ್ಚಾ ಅಧ್ಯಕ್ಷ ಎಸ್.ನಾರಾಯಣ್, 5 ಬಾರಿ ಚುನಾಯಿತರಾಗಿ ಅಧ್ಯಕ್ಷರಾಗಿದ್ದ ನವೀನ್‌ಚಂದ್ರ ನಾಯಕ್, ಕಾಂಗ್ರೆಸ್ ಬೆಂಬಲಿತ ಮಾಜಿ ಸದಸ್ಯರಾದ ರಾಜು ಸಾಲ್ಯಾನ್, ದೇವಾನಂದ ನಾಯಕ್, ಗೋಪಾಲ್ ದೇವಾಡಿಗ, ಕವಿತಾ, ಕ್ರಿಸ್ಪಿನ್ ಡಿಸಿಲ್ವ, ಹೇಮಾ ಶೆಟ್ಟಿಗಾರ್, ಸದಾನಂದ ಪೂಜಾರಿ, ಗುಲಾಬಿ ಕುಂದರ್, ರಾಜೇಶ್ ಶೆಟ್ಟಿ ಬಿರ್ತಿ ಸೇರಿ 12 ಮಂದಿ ಶಾಸಕ ಕೆ.ರಘುಪತಿ ಭಟ್ ಸಮ್ಮುಖ ಬಿಜೆಪಿಗೆ ಸೇರ್ಪಡೆಗೊಂಡರು.
ವಾರಂಬಳ್ಳಿ ಗ್ರಾಪಂ ಒಟ್ಟು 18 ಸದಸ್ಯರ ಬಲ ಹೊಂದಿದ್ದು 12 ಮಂದಿ ಬಿಜೆಪಿಗೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಚುನಾವಣಾ ಕಣದ ಚಿತ್ರಣ ಬದಲಾಗುವ ನಿರೀಕ್ಷೆ ಕಂಡುಬಂದಿದೆ. ಪಕ್ಷದ ಅಧ್ಯಕ್ಷೆ ವೀಣಾ ನಾಯ್ಕ, ಪ್ರಮುಖರಾದ ಅಶೋಕ್ ಹೇರೂರು, ಸುಧೀರ್ ಶೆಟ್ಟಿ, ನಿಶಾನ್ ರೈ, ಕುಸುಮ ಪೂಜಾರ‌್ತಿ, ನಾಗವೇಣಿ ಮೊದಲಾದವರು ಉಪಸ್ಥಿತರಿದ್ದರು.