ವೀರನಗೌಡ ಪಾಟೀಲ್ ಲೆಕ್ಕಿಹಾಳ 
ಜಿಲ್ಲೆ

ಕಾಂಗ್ರೆಸ್ ನಾಯಕರೇ ಡ್ರಗ್ಸ್ಸ್ ಜಾಲದ ರೂವಾರಿಗಳು

ಸಿಂಧನೂರು: ಕಲಬುರಗಿಯಲ್ಲಿ ಕಾಂಗ್ರೆಸ್ ನಾಯಕರೇ ಡ್ರಗ್ಸ್ಸ್ ಜಾಲದ ರೂವಾರಿಗಳಾಗಿದ್ದರೂ ಸರ್ಕಾರ ಈವರೆಗೂ ಕ್ರಮಕೈಗೊಂಡಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊರರಾಜ್ಯಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಡ್ರಗ್ಸ್ ಮಾರಾಟ ಕರ್ನಾಟಕದಲ್ಲೂ ಸಕ್ರಿಯವಾಗಿದೆ. ಮಹಾರಾಷ್ಟ್ರ ಪೊಲೀಸರು ಲಿಂಗರಾಜ ಕಣ್ಣಿಯನ್ನು ಬಂಧಿಸಿದ ಬಳಿಕ ಎಲ್ಲವೂ ಬಹಿರಂಗವಾಗಿದೆ. ದೇಶ-ವಿದೇಶದ ವಿಚಾರ ಮಾತನಾಡುವ ಮಲ್ಲಿಕಾರ್ಜುನ ಖರ್ಗೆ ತಮ್ಮ ಆಪ್ತರು ನಡೆಸುತ್ತಿರುವ ಅಕ್ರಮದ ಕುರಿತು ಮೌನವಹಿಸಿರುವುದು ಅಚ್ಚರಿ ಮೂಡಿಸಿದೆ. ನರೇಗಾ ಯೋಜನೆಯಲ್ಲಿ ದರೋಡೆ ಮಾಡುತ್ತಿದ್ದು, ಖರ್ಗೆ ಇದರಲ್ಲಿ ಶಾಮೀಲಾಗಿರುವ ಶಂಕೆ ಇದೆ. ಆದ್ದರಿಂದ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು. ನವಲಿ ಜಲಾಶಯ, ತಿಂಥಣಿ ಬ್ರಿಡ್ಜ್ ಹಾಗೂ ಏಮ್ಸ್‌ಗೆ ಸಂಬಂಧಿಸಿದಂತೆ ಬಿಜೆಪಿಯಿಂದ ಬೃಹತ್ ಹೋರಾಟ ನಡೆಸಲಾಗುವುದು ಎಂದರು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ತಾಲೂಕು ಅಧ್ಯಕ್ಷ ವೆಂಕೋಬ ನಾಯಕ, ಬಸವರಾಜ ಇತರರಿದ್ದರು.